ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಉಡುಪಿ: 10ರಿಂದ ಮುರಾರಿ ಕೆದ್ಲಾಯ ರಂಗೋತ್ಸವ

Vishwanath S
Updated On : 8 Apr 2013, 11:32 am

ಉಡುಪಿ: ಇಲ್ಲಿನ ರಥಬೀದಿ ಗೆಳೆಯರು ಆಶ್ರಯದಲ್ಲಿ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿಯಾಗಿದ್ದ ಪ್ರೊ.ಕೆ. ಎಸ್. ಕೆದ್ಲಾಯ ಮತ್ತು ಸಂಸ್ಥೆಯ ಅಧ್ಯಕ್ಷರಾಗಿದ್ದ ಖ್ಯಾತ ಪರಿಸರವಾದಿ ಡಾ.ನಿ. ಮುರಾರಿ ಬಲ್ಲಾಳ್ ನೆನಪಿನ 3ನೇ ವರ್ಷದ ಮುರಾರಿ ಕೆದ್ಲಾಯ ರಂಗೋತ್ಸವ 10ರಿಂದ 14 ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಎಂ.ಜಿ.ಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಜರುಗಲಿದೆ.
10ರಂದು ಖ್ಯಾತ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ  ಚಾಲನೆ ನೀಡಲಿದ್ದಾರೆ. 14ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ ಭಾಗವಹಿಸಲಿದ್ದಾರೆ.
ಮೊದಲ ದಿನ ಮುದ್ರಾಡಿಯ ನಮ್ಮ ತುಳುವೆರ್ ಕಲಾ ಸಂಘಟನೆ ಕಲಾವಿದರಿಂದ ಮೂರು ಹೆಜ್ಜೆಗಳ ಮೂರು ಲೋಕ ನಾಟಕ ಪ್ರದರ್ಶನಗೊಳ್ಳಲಿದೆ. 11ರಂದು ಮಣಿಪಾಲ ಪಪೂ ಕಾಲೇಜಿನ ಚಿನ್ನಾರಿ ಕಲಾವಿದರಿಂದ ರೆಕ್ಕೆ ಕಟ್ಟುವಿರಾ...?, 12ರಂದು ಸಾಣೆಹಳ್ಳಿಯ ಶಿವಸಂಚಾರ ತಂಡದಿಂದ ಸೊಳ್ಳೆ ಸನ್ಯಾಸಿ, 13ರಂದು ಸದಾರಮೆ ಪ್ರದರ್ಶನವಿದೆ.
ಸಮಾರೋಪ: 14ರಂದು ಸಮಾರೋಪ ಸಮಾರಂಭ, ನಂತರ ಕಳ್ಳರೋ ಬಲುಗಳ್ಳರೋ ಪ್ರದರ್ಶನಗೊಳ್ಳಲಿವೆ ಎಂದು ರಥಬೀದಿ ಗೆಳೆಯರು ಸಂಸ್ಥೆ ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ, ಕಾರ್ಯದರ್ಶಿ ಪ್ರೊ. ಸುಬ್ರಹ್ಮಣ್ಯ ಜೋಶಿ, ನಾಟಕ ವಿಭಾಗದ ಸಂಚಾಲಕ ಸಂತೋಷ್ ಶೆಟ್ಟಿ ಹಿರಿಯಡ್ಕ ಮತ್ತು ಉದ್ಯಾವರ ನಾಗೇಶ ಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement