ಗಂಗಯ್ಯ ಶೆಟ್ಟಿಗೆ 'ಯಕ್ಷಮಂಗಳ'
ಮಂಗಳೂರು: ಕಟೀಲು ಮೇಳದ ಹಿರಿಯ ವೇಷಧಾರಿ ಗೇರುಕಟ್ಟೆ ಗಂಗಯ್ಯ ಶೆಟ್ಟಿಗೆ ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಅಧ್ಯಯನ ಕೇಂದ್ರದ “¾ÚßOÚÐÈÚßMVÚ×Ú ®ÚÃËÚÒ¡’ ಪ್ರಕಟಿಸಲಾಗಿದೆ. ಏ.20ರಂದು ವಿವಿಯ ಮಂಗಳ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗಂಗಯ್ಯ ಶೆಟ್ಟಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ 25 ಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆಗಳನ್ನು ಒಳಗೊಳ್ಳಲಿದೆ. ಕಟೀಲು ಮೇಳದಲ್ಲಿ 40 ವರ್ಷ ತಿರುಗಾಟ ಪೂರೈಸಿದ ಶೆಟ್ಟರು, ಹಿರಣ್ಯಾಕ್ಷ, ಕೌಂಡ್ಲಿಕ, ಮಹಿಷಾಸುರ, ನರಕಾಸುರ, ಮೈರಾವಣ, ರಾವಣ, ಕುಂಭಕರ್ಣ, ಶುಂಭ, ಮಧು-ಕೈಟಭ ಮೊದಲಾದ ವೇಷಗಳಿಂದ ಪ್ರಸಿದ್ಧರಾಗಿದ್ದಾರೆ. ಮಹಿಷಾಸುರ ಮತ್ತು ರುದ್ರಭೀಮ ಇವರಿಗೆ ಹೆಚ್ಚಿನ ಕೀರ್ತಿ ತಂದುಕೊಟ್ಟಿವೆ. ಮೇಳದ ವ್ಯವಸ್ಥಾಪಕರಾಗಿಯೂ ಕಾರ್ಯನಿರ್ವಹಿಸಿ ಸಂಘಟನೆಯ ಅನುಭವ ಇವರದು.