ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬೆನ್ನು ಮೂಳೆ ಸರಿಪಡಿಸುವ ಆಧುನಿಕ ಯಶಸ್ವಿ ಶಸ್ತ್ರಚಿಕಿತ್ಸೆ

Vishwanath S
Updated On : 8 Apr 2013, 11:32 am

ಮಂಗಳೂರು: ಕೆಎಂಸಿ ಆಸ್ಪತ್ರೆಯಲ್ಲಿ ಬಲೂನ್ ಕೈಫೋಪ್ಲಾಸ್ಟಿಯ ಶಸ್ತ್ರಚಿಕಿತ್ಸೆಯ ಮೂಲಕ 56 ವಯಸ್ಸಿನ ವ್ಯಕ್ತಿಯ ಬೆನ್ನು ಮೂಳೆ ಮುರಿತವನ್ನು ಯಶಸ್ವಿಯಾಗಿ ಸರಿಪಡಿಸಲಾಗಿದೆ.
ಕೆಎಂಸಿಯ ಬೆನ್ನುಮೂಳೆ ತಜ್ಞರಾದ ಡಾ. ಈಶ್ವರ ಕೀರ್ತಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಅರಿವಳಿಕೆ ತಜ್ಞ ಡಾ.ಎಸ್. ರಾಮಮೂರ್ತಿ ನೆರವು ನೀಡಿದರು. ವ್ಯಕ್ತಿಗೆ ಬೆನ್ನು ಮೂಳೆ ಮುರಿತದಿಂದ ಕುಳಿತುಕೊಳ್ಳಲು, ನಿಲ್ಲಲು, ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಶಸ್ತ್ರಚಿಕಿತ್ಸೆ ನಡೆಸಿದ ನಂತರ ವ್ಯಕ್ತಿ ಕೇವಲ ಎರಡು ದಿನದಲ್ಲಿ ಎದ್ದು ನಡೆದಾಡಲು ಪ್ರಾರಂಭಿಸಿದ್ದು, ಆಸ್ಪತ್ರೆಯಿಂದ ಕಳುಹಿಸಲಾಗಿದೆ. ಈ ಶಸ್ತ್ರ ಚಿಕಿತ್ಸೆಯಿಂದ ರೋಗಿ ಒಂದು ವಾರದಲ್ಲಿ ತಮ್ಮ ಕೆಲಸ ಕಾರ್ಯದಲ್ಲಿ ತೊಡಗಬಹುದು.
ಶಸ್ತ್ರಚಿಕಿತ್ಸೆಯಲ್ಲಿ ಆರ್ಥೋಪಡಿಕ್ ಬಲೂನುಗಳನ್ನು ಬಳಸಿ ಮುರಿದ ಬೆನ್ನುಮೂಳೆಯ ತುಂಡುಗಳನ್ನು ಸ್ವಸ್ಥಾನಕ್ಕೆ ಸೇರಿಸಿ ಸರಿಪಡಿಸಬಹುದಾಗಿದೆ. ಇದಕ್ಕೆ ಸಾಮಾನ್ಯ ಅರಿವಳಿಕೆ ನೀಡಿ, ಒಂದು ಗಂಟೆಗಿಂತಲೂ ಕಡಿಮೆ ಅವಧಿಯಲ್ಲಿ ಚಿಕಿತ್ಸೆ ಮಾಡಬಹುದಾಗಿದೆ.
ಎಲ್ಲಾ ರೀತಿಯ ಬೆನ್ನುಮೂಳೆ ಸಮಸ್ಯೆಗಳನ್ನು ಸರಿಪಡಿಸುವಂಥ ಆಧುನಿಕ ತಂತ್ರಜ್ಞಾನ ಆಸ್ಪತ್ರೆಯಲ್ಲಿದೆ. ಮಕ್ಕಳು ಮತ್ತು ವಯಸ್ಕರಲ್ಲಿನ ಬೆನ್ನುಮೂಳೆಯ ವಿರೂಪತೆ, ಡಿಸ್ಕಿನ ತೊಂದರೆ, ಕ್ಯಾನ್ಸರ್ ಇವುಗಳನ್ನು ಚಿಕಿತ್ಸೆ ನೀಡುವ ಸೌಲಭ್ಯಗಳು ಇಲ್ಲಿವೆ.
ಸಾರ್ವಜನಿಕರು ಆಸ್ಪತ್ರೆಯಲ್ಲಿ ಲಭ್ಯವಿರುವ ಉನ್ನತ ಚಿಕಿತ್ಸಾ ಸೌಲಭ್ಯಗಳ ಪ್ರಯೋಜನ ಪಡೆಯಬಹುದು ಎಂದು ಕೆಎಂಸಿ ಆಸ್ಪತ್ರೆಯ ಮಂಗಳೂರು ಘಟಕದ ಮುಖ್ಯಸ್ಥ ಪ್ರಮೋದ್ ಅಲಘಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement