ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಮ್ಮೇಳನಕ್ಕೆ ಉದ್ಯಮಗಳ ನೆರವು ಸೂಕ್ತವಲ್ಲ: ನಾಗವೇಣಿ

Vishwanath S
Updated On : 8 Apr 2013, 11:28 am

ಮಂಗಳೂರು: ಸಾಹಿತ್ಯ ಸಮ್ಮೇಳವನ್ನು ಉದ್ಯಮಗಳ ಸಹಕಾರದಿಂದ ನಡೆಸುವುದು ಸೂಕ್ತವಲ್ಲ ಎಂದು ಸಾಹಿತಿ ಹಂಪಿ ನಾಗವೇಣಿ ಎಚ್. ಅಭಿಪ್ರಾಯಪಟ್ಟಿದ್ದಾರೆ.
ಕುಳಾಯಿಯಲ್ಲಿ ಭಾನುವಾರ ನಡೆದ ಮಂಗಳೂರು ತಾಲೂಕುಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಅವರು ಮಾತನಾಡಿದರು.
ಅಕಾಡೆಮಿ ವತಿಯಿಂದ ಮತ್ತು ಕನ್ನಡ ಅಭಿಮಾನಿಗಳ ಸಹಕಾರದಿಂದ ಕನ್ನಡ ಕಾರ್ಯಕ್ರಮಗಳು ನಡೆದರೆ ಉತ್ತಮ. ಕಂಪನಿಗಳ ಬಳಿ ಸಹಕಾರ ಕೇಳುವುದು ಉಚಿತವಲ್ಲ ಎಂದರು.
ಕನ್ನಡಾಭಿಮಾನ ಬೆಳೆಯುತ್ತದೆ: ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸಮ್ಮೇಳನದಲ್ಲಿ ಉದ್ಯಮಿಗಳನ್ನು ತೊಡಗಿಸಿಕೊಳ್ಳುವುದರಿಂದ ಅವರಿಗೂ ಕನ್ನಡದ ಅಭಿಮಾನ ತಿಳಿಸಿದಂತಾಗುತ್ತದೆ. ಇದರಿಂದ ಭಾಷೆಯ ಜತೆಗಿನ ಸಂಬಂಧ ಉತ್ತಮಗೊಳ್ಳುತ್ತದೆ ಎಂದರು.
ಸಮ್ಮೇಳನಾಧ್ಯಕ್ಷೆ ಲೀಲಾವತಿ ಎಸ್.ರಾವ್ ಮಾತನಾಡಿ, ಸಮ್ಮೇಳನ ನಡೆಸುವಾಗ ಟೀಕೆ ಟಿಪ್ಪಣಿಗಳು ಬರುವುದು ಸಾಮಾನ್ಯ. ಕನ್ನಡ ಸಮ್ಮೇಳನ ಕಾರ್ಯಕ್ರಮವಾಗಿ ನಡೆಸದೆ, ಕನ್ನಡ ನಾಡುನುಡಿ ಹಬ್ಬದಂತೆ ಆಚರಿಸಿದರೆ ಜನ ಮನದಲ್ಲಿ ಉಳಿಯಬಹುದು ಎಂದರು.
ಸಾಧಕರಿಗೆ ಸನ್ಮಾನ: ಈ ಸಂದರ್ಭ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 11 ಮಂದಿಯನ್ನು ಸನ್ಮಾನಿಸಲಾಯಿತು. ಸಮಾಜಸೇವೆ- ಪಟೇಲ್ ಶ್ರೀನಿವಾಸ ರಾವ್, ಯಕ್ಷಗಾನ- ಪಿ. ಶ್ರೀಧರ ಐತಾಳ್, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ, ತುಳು ಸಾಹಿತ್ಯ- ಮನು ಇಡ್ಯಾ, ರಂಗಭೂಮಿ- ಮಾಧವ ಭಂಡಾರಿ, ಗೀತಾ ಸುರತ್ಕಲ್, ಕುಶಲಕರ್ಮಿ- ಗಿಲ್ಬರ್ಟ್ ಡಿಸೋಜ, ಕೈಮಗ್ಗ ನೇಕಾರಿಕೆ- ದೇವೇಂದ್ರ ಶೆಟ್ಟಿಗಾರ್, ಭೂತಾರಾಧನೆ- ಮನ್ಸಪಾತ್ರಿ, ನೃತ್ಯ- ಪ್ರತಿಮಾ ಶ್ರೀಧರ್ ಹೊಳ್ಳ, ಸಂಗೀತ- ಅಂಬಿಕಾ ಎಚ್.ಎ. ರಾವ್
ವಿದ್ವತ್ ಸನ್ಮಾನದಲ್ಲಿ ಹರಿದಾಸ ವಾದೀಶಾಚಾರ್ಯ ಹೊಸಬೆಟ್ಟು, ವಿದ್ವಾನ್ ಎಂ. ನಾರಾಯಣ, ವೇದಮೂರ್ತಿ ಪಾವಂಜೆ ಕೃಷ್ಣ ಭಟ್, ಡಾ. ವಾಮನ ನಂದಾವರ ಇವರನ್ನು ಗೌರವಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement