ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಆಳ್ವಾಸ್‌ನಲ್ಲಿ ಉಚಿತ ಶಿಕ್ಷಣ: 16ರಂದು ಸುಳ್ಯದಲ್ಲಿ ಸಂದರ್ಶನ

Vishwanath S
Updated On : 9 Apr 2013, 11:22 am

ಸುಳ್ಯ: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಂಗ ಸಂಸ್ಥೆಯಾದ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಉಚಿತ ಶಿಕ್ಷಣ ಯೋಜನೆಯ ವಿದ್ಯಾರ್ಥಿಗಳ ಆಯ್ಕೆಗಾಗಿ 16ರಂದು ಸುಳ್ಯದ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ.
6,7,8,9ನೇ ತರಗತಿಗೆ 2012-13ನೇ ಸಾಲಿನಲ್ಲಿ ಶೈಕ್ಷಣಿಕ ರಂಗ(ಎ ಗ್ರೇಡ್), ಕ್ರೀಡೆ ಹಾಗೂ ಶಾಸ್ತ್ರೀಯ ಸಂಗೀತ, ನಾಟಕ, ಪಕ್ಕವಾದ್ಯ, ಯಕ್ಷಗಾನ, ಜಾನಪದ ಇತ್ಯಾದಿ ಸಾಂಸ್ಕೃತಿಕ ರಂಗದ ಸಾಧಕ ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕಾಗಿ ಈ ಸಂದರ್ಶನದಲ್ಲಿ ಭಾಗವಹಿಸಬಹುದು. ಆಯ್ಕೆಯಾದವರಿಗೆ ಗುಣಮಟ್ಟದ ಶಿಕ್ಷಣ, ಊಟ, ವಸತಿ, ಸಮವಸ್ತ್ರ ಎಲ್ಲವೂ ಉಚಿತವಾಗಿರುತ್ತದೆ. ಸುಳ್ಯ ತಾಲೂಕಿನ ವಿದ್ಯಾರ್ಥಿಗಳ ಮತ್ತು ಹೆತ್ತವರ ಅನುಕೂಲಕ್ಕಾಗಿ ಸುಳ್ಯದಲ್ಲೇ ಈ ಸಂದರ್ಶನ ಏರ್ಪಡಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಕಟಣೆ ತಿಳಿಸಿದೆ.

ಕರ್ಣಾಟಕ ಬ್ಯಾಂಕ್ ಬಂಟಕಲ್ಲು ಶಾಖೆ  ಸ್ಥಳಾಂತರ ಸಮಾರಂಭ
ಮಂಗಳೂರು:
ಕರ್ಣಾಟಕ ಬ್ಯಾಂಕ್‌ನ ಬಂಟಕಲ್ಲು ಶಾಖೆಯ ಸ್ಥಳಾಂತರ ಸಮಾರಂಭ ಸೋಮವಾರದಂದು ಉಡುಪಿ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಉಪೇಂದ್ರ ನಾಯಕ್ ಉದ್ಘಾಟಿಸಿದರು. ಬಂಟಕಲ್ ಶಾಂತಿಪುರದ ಹೋಲಿಕ್ರಾಸ್ ಚರ್ಚ್‌ನ ಧರ್ಮಗುರು ರೆ.ಫಾ. ಚಾರ್ಲ್ಸ್‌ಜೋನ್ ಲೂಯಿಸ್ ದೀಪ ಬೆಳಗಿಸಿದರು. ಬ್ಯಾಂಕಿನ ಮಹಾಪ್ರಬಂಧಕ ಎಂ.ಎಸ್. ಮಹಾಬಲೇಶ್ವರ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಂಟಕಲ್‌ನ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಟಿ. ವಿಶ್ವನಾಥ್ ನಾಯಕ್, ಬ್ಯಾಂಕಿನ ಮಂಗಳೂರು ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ಎಚ್.ಪಿ.ಆರ್. ಹಂದೆ, ಮುಖ್ಯ ಪ್ರಬಂಧಕ ನಾಗೇಶ್ ರಾವ್ ಜಿ.ಎಂ, ಬಂಟಕಲ್ ಶಾಖಾ ಪ್ರಬಂಧಕ ಎಂ. ವಿಠ್ಠಲ್ ವಾಗ್ಲೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement