ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇಂದು ನೀರಿಲ್ಲ

Vishwanath S
Updated On : 9 Apr 2013, 11:25 am

ಮಂಗಳೂರು: ತುಂಬೆ ನೀರು ಸರಬರಾಜು ಕೇಂದ್ರದಲ್ಲಿ ಏ. 9ರಂದು ವಿದ್ಯುತ್ ಕಡಿತಗೊಳ್ಳಲಿರುವ ಹಿನ್ನಲೆಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರ ತನಕ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಮಂಗಳವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ವಿದ್ಯುತ್ ಕಡಿತಗೊಳ್ಳಲಿದ್ದು, ಮಂಗಳೂರು ನಗರ, ಪಣಂಬೂರು ಹಾಗೂ ಸುರತ್ಕಲ್ ವ್ಯಾಪ್ತಿಯಲ್ಲಿ ನೀರು ಸಂಚಾರ ಸ್ಥಗಿತಗೊಳ್ಳಲಿದೆ. ಸಾರ್ವಜನಿಕರು ಸಹಕರಿಸುವಂತೆ ಪಾಲಿಕೆ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿದ್ದಾರೆ.

ನೀರು ಪೂರೈಕೆ ವ್ಯತ್ಯಯ
ಮೂಲ್ಕಿ:
ಮಂಗಳೂರು ಮಹಾನಗರ ಪಾಲಿಕ ಮೂಲಕ ತುಂಬೆಯಿಂದ ಮೂಲ್ಕಿಗೆ ಬರುವ ಕುಡಿಯುವ ನೀರಿನ ಪೈಪು ಪಾವಂಜೆಯ ಬಳಿ ತುಂಡಾಗಿದ್ದು ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದ್ದು ಇದರಿಂದ ಮೂಲ್ಕಿ ನಗರ ಪಂಚಾಯಿತಿಗೆ ಕುಡಿಯುವ ನೀರಿನ ಸರಬರಾಜಿಗೆ ತಡೆಯುಂಟಾಗಿದ್ದು ಮುಂದಿನ ಎರಡು ದಿನಗಳ ಕಾಲ ನೀರಿನ ಸಮಸ್ಯೆಯಿದ್ದು ನಾಗರಿಕರು ಸಹಕರಿಸುವಂತೆ ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಶಶಿಕಾಂತ್ ಶೆಟ್ಟಿ ತಿಳಿಸಿದ್ದಾರೆ.

ಇಂದು ರಕ್ತದಾನ ಶಿಬಿರ
ಸುಬ್ರಹ್ಮಣ್ಯ:
ರಕ್ತದಾನ ಶಿಬಿರ ಹಾಗೂ ಹೊನಲು ಬೆಳಕಿನ ಪುರುಷರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಇಲ್ಲಿನ ಕುಮಾರಸ್ವಾಮಿ ವಿದ್ಯಾಲಯ ವಿದ್ಯಾನಗರದಲ್ಲಿ ಮಂಗಳವಾರ ನಡೆಯಲಿದೆ. ಇಲ್ಲಿನ ಅನುಗ್ರಹ ಎಜ್ಯುಕೇಶನ್ ಟ್ರಸ್ಟ್, ಕುಕ್ಕೆಶ್ರೀ ಜೇಸಿಐ ಹಾಗೂ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಜಂಟಿ ಸಹಭಾಗಿತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ದಿ. ಲ.ಎಂ.ಜೆ.ಎಫ್.ಎಂ ಕುಮಾರ್ ನಾಯರ್ ಸ್ಥಾಪಕರ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಇಂದು ವಿಪ್ರ ಸಮಾವೇಶ
ಮಂಗಳೂರು:
ಕಟೀಲು ಗೋಪಾಲ ಕೃಷ್ಣ ಅಸ್ರಣ್ಣ ಸ್ಮಾರಕ ಭವನದಲ್ಲಿ ಏ. 9ರಂದು ಕರಾವಳಿ ಜಿಲ್ಲಾ 'ವಿಪ್ರ ಪ್ರಾಂತೀಯ ಸಮಾವೇಶ' ನಡೆಯಲಿದೆ. ಸಮಾವೇಶದಲ್ಲಿ ಬ್ರಾಹ್ಮಣರ ಸಮಸ್ಯೆಗಳ ಬಗ್ಗೆ ವರ್ಗ ಭೇದ ಮರೆತು ಚರ್ಚಿಸಲಾಗುವುದು. ಕರಾವಳಿ ಬ್ರಾಹ್ಮಣ ಸಂಘದ ಅಧ್ಯಕ್ಷ ಹರಿಕೃಷ್ಣ ಪುನರೂರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಎಂ.ಆರ್. ವಾಸುದೇವ ರಾವ್ ಉದ್ಘಾಟಿಸುವರು. ಪ್ರದೀಪ್ ಕುಮಾರ್ ಕಲ್ಕೂರ, ಪಂಜ ಭಾಸ್ಕರ ಭಟ್, ಎಕ್ಕಾರು ಪದ್ಮನಾಭ ಭಟ್, ಜಯ ಲಕ್ಷ್ಮಿ ಕಾರಂತರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

16ರಿಂದ ಕಲಾ ತರಬೇತಿ
ಮಂಗಳೂರು:
ಶ್ರೀ ಚಕ್ರಪಾಣಿ ಫೈನ್ ಆರ್ಟ್ಸ್ ಅಂಡ್ ಎಜುಕೇಶನ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ಏ. 16ರಿಂದ ಮೇ. 20ರವರೆಗೆ ಅತ್ತಾವರದ ಚಕ್ರಪಾಣಿ ಕಲಾ ಶಾಲೆಯಲ್ಲಿ 'ಕಲಾ ತರಬೇತಿ ಶಿಬಿರ' ನಡೆಯಲಿದೆ. ಶಿಬಿರದಲ್ಲಿ ಆರ್ಟ್ ಅಂಡ್ ಕ್ರಾಫ್ಟ್ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಸುರೇಶ್ ಎಸ್. ಪಾಂಡವರಕಲ್ಲು- 9448549279 ಸಂಪರ್ಕಿಸಬಹುದು.

11ರಿಂದ ಬೇಸಗೆ ಶಿಬಿರ
ಸುಳ್ಯ:
ಸುಳ್ಯದ ಶ್ರೀಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ವತಿಯಿಂದ 'ಸಂಸ್ಕಾರ ವಾಹಿನಿ-2013' ಮಕ್ಕಳ ಬೇಸಗೆ ಶಿಬಿರ ಏ.11ರಿಂದ 18ರತನಕ ಕಾಯರ್ತೋಡಿ ಶ್ರೀಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಲಿದೆ. ಸಮಾಜದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಧಾರ್ಮಿಕ- ಸಾಂಸ್ಕೃತಿಕ ಪ್ರಜ್ಞೆ ಬೆಳೆಸುವ ಮೂಲಕ ಭಾರತೀಯ ಸಂಸ್ಕಾರ, ಸಂಸ್ಕೃತಿ, ಸಭ್ಯತೆಯೊಂದಿಗೆ ರಾಷ್ಟ್ರಭಕ್ತಿಯನ್ನು ಉಳಿಸಿ ಬೆಳೆಸುತ್ತ, ಸ್ಪಷ್ಟ ಉಚ್ಚಾರದೊಂದಿಗೆ ಸಂಸ್ಕೃತ ಶ್ಲೋಕಗಳನ್ನು, ದೇವತಾ ಪ್ರಾರ್ಥನೆ, ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ, ಭಗವದ್ಗೀತೆ, ವೇದಮಂತ್ರಗಳು, ಯೋಗಾಭ್ಯಾಸ, ಆದರ್ಶ ಪುರುಷರ ಜೀವನ ಚರಿತ್ರೆ, ಪುರಾಣ ಐತಿಹಾಸಿಕ ಕಥೆಗಳನ್ನು ಕಲಿಸುವುದರೊಂದಿಗೆ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಪೂರಕವಾಗಿ ಸೃಜನಾತ್ಮಕ ಕಲೆಗಳಾದ ಜಾದು, ಬೊಂಬೆ ತಯಾರಿ, ಚಿತ್ರಕಲೆ, ಗ್ರೀಟಿಂಗ್ಸ್, ರಂಗ ಗೀತೆಗಳು, ನಾಟಕ, ಆಟಗಳನ್ನು ಆಯ್ದ 100 ವಿದ್ಯಾರ್ಥಿಗಳಿಗೆ ಊಟ- ಉಪಹಾರ, ಪುಸ್ತಕಗಳ ಜೊತೆಗೆ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು.

11ರಿಂದ ಜಪಾನುಷ್ಠಾನ
ಮಂಗಳೂರು:
ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣಕ್ಕಾಗಿ ವಿಜಯ ಮಹಾಮಂತ್ರ ಜಪಾನುಷ್ಠಾನ ಏ.11ರಿಂದ ಮೇ 13ರ ವರೆಗೆ ಮಂಗಳೂರು ವಿಭಾಗದಲ್ಲಿ ನಡೆಯಲಿದೆ.  ವಿಶ್ವ ಹಿಂದು ಪರಿಷತ್ ಕರ್ನಾಟಕ ಪ್ರಾಂತ ಕಾರ್ಯದರ್ಶಿ ಟಿ.ಎ.ಪಿ. ಶೆಣೈ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.  ಫೆ.6 ಮತ್ತು 7ರಂದು ಪ್ರಯಾಗದ ಮಹಾಕುಂಭ ಮೇಳದಲ್ಲಿ ನಡೆದ ಸಂತ ಸಮ್ಮೇಳನ ಕೈಗೊಂಡ ನಿರ್ಣಯದಂತೆ ಈ ಕಾರ್ಯಕ್ರಮ ನಡೆಯಲಿದೆ. ಕಳೆದ ಬಾರಿ ಹನುಮಾನ್ ಚಾಲೀಸ್ ಪಠಣದಿಂದ ಅಲಹಾಬಾದ್ ಕೋರ್ಟ್‌ನಿಂದ ಹಿಂದೂ ಪರ ತೀರ್ಪು ಬಂತು, ಹಾಗೆಯೇ ಮಂದಿರ ನಿಮಾಣ ಸುಲಲಿತವಾಗಲು ವಿಜಯ ಮಹಾಮಂತ್ರ ಜಪಾನುಷ್ಠಾನಕ್ಕೆ ಸಂತ ಸಮ್ಮೇಳನ ಕರೆ ನೀಡಿದೆ ಎಂದರು.   
  ಹಿಂದೂ ಸಮಾಜದ ಮನೆಗಳಲ್ಲಿ 'ಶ್ರೀರಾಮ ಜಯ ರಾಮ ಜ ಜಯ ರಾಮ' ಎನ್ನುವ ವಿಜಯ ಮಹಾ ಮಂತ್ರವನ್ನು ಜಪಿಸಬೇಕು. ಈ ಅಭಿಯಾನದಲ್ಲಿ ಹಿಂದೂ ಮನೆಗಳಿಗೆ ಜಪಮಾಲೆ, ಭಗವಾಧ್ವಜ, ಶ್ರೀರಾಮನ ಫೋಟೋ ನೀಡಲಾಗುವುದು. ಜಪಮಾಲೆಯನ್ನು ಧರಿಸಿ 108 ಸಾರಿ 33 ದಿನ ಜಪ ಮಾಡಬೇಕು. ಕರ್ನಾಟಕ ದಕ್ಷಿಣ ಪ್ರಾಂತದಲ್ಲಿ 5 ಲಕ್ಷ ಕುಟುಂಬ ಜಪಾನುಷ್ಠಾನದಲ್ಲಿ ಪಾಲ್ಗೊಳ್ಳಲಿದೆ. ಪ್ರಾಂತದ 6 ಸಾವಿರ ಗ್ರಾಮಗಳ ಹಿಂದು ಕುಟುಂಬಗಳು, ದೇಶದಲ್ಲಿ 3 ಲಕ್ಷ ಗ್ರಾಮಗಳು 10 ಕೋಟಿ ಹಿಂದುಗಳು ಇದರಲ್ಲಿ ಭಾಗವಹಿಸುವರು ಎಂದರು.  ದಕ್ಷಿಣ ಭಾರತ ಸಂಘಟನಾ ಕಾರ್ಯದರ್ಶಿ ಸುಧಾಂಶು ಪಟ್ನಾಯಕ್, ವಿಭಾಗ ಕಾರ್ಯದರ್ಶಿ ಕೃಷ್ಣಮೂರ್ತಿ, ಮುಖಂಡರಾದ ಬಾಯಾಡಿ ವೆಂಕಟ್ರಮಣ ಭಟ್, ಗೋಪಾಲ್ ಕುತ್ತಾರ್, ಶರಣ್ ಪಂಪ್‌ವೆಲ್ ಹಾಜರಿದ್ದರು.

ಕಣಿಯಾರುಬೈಲು ಶಾಲಾ ಸುವರ್ಣ ಮಹೋತ್ಸವ
ಪುತ್ತೂರು:
ಕೆಯ್ಯೂರು ಗ್ರಾಮದ ಕಣಿಯಾರುಬೈಲು ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಎ.9ರಂದು ನಡೆಯಲಿದೆ ಎಂದು ಸುವರ್ಣ ಸಂಭ್ರಮದ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷ ಎ.ಕೆ. ಜಯರಾಮ ರೈ ಮತ್ತು ಅಧ್ಯಕ್ಷ ಎಸ್.ಬಿ. ಜಯರಾಮ ರೈ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮವನ್ನು ಶಾಸಕಿ ಮಲ್ಲಿಕಾ ಪ್ರಸಾದ್ ಉದ್ಘಾಟಿಸಲಿದ್ದಾರೆ. ಕೆದಂಬಾಡಿ ಗ್ರಾ. ಪಂ. ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆ ವಹಿಸಲಿದ್ದಾರೆ. ನೂತನ ರಂಗಮಂದಿರವನ್ನು ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಂ. ಪಕೀರ ನಡೆಸಲಿದ್ದಾರೆ. ಸಮಾರಂಭದಲ್ಲಿ ಸಾಧಕರಾದ ಪರಮೇಶ್ವರ ಭಟ್ ಅತ್ರ್ಯಡ್ಕ, ನಾರಾಯಣ ಭಟ್ ಪಲ್ಲತ್ತಡ್ಕ, ಅಶ್ವತ್ ಕೆ.ಎಸ್, ಅಶೋಕ್ ಕೆ.ಎಸ್. ಮತ್ತು ಹುಕ್ರ ಅಜಲಾಯ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪಂಜಿನಡ್ಕ: 13ರಂದು ಯಕ್ಷ ಗುರುವಂದನೆ
ಮೂಲ್ಕಿ:
ಸಮೀಪದ ಪಂಜಿನಡ್ಕದ ಯಕ್ಷಮಿತ್ರರು ಆಶ್ರಯದಲ್ಲಿ ಯಕ್ಷ ಗುರುವಂದನೆ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮ ಪಂಜಿನಡ್ಕದಲ್ಲಿ ಏ.13ರಂದು ಸಂಜೆ ಜರುಗಲಿದೆ. ಕಿಲ್ಪಾಡಿ ಪಂಚಾಯಿತಿ ಅಧ್ಯಕ್ಷೆ ಶಾರದಾ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಯಕ್ಷ ಗುರುವಂದನೆಯನ್ನು ಪಂಜಿನಡ್ಕ ಕೆಪಿಎಸ್‌ಕೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಸಂತ್ ಕುಮಾರ್ ನೆರವೇರಿಸಲಿದ್ದು, ಯಕ್ಷಮಿತ್ರ ಪಂಜಿನಡ್ಕ ಅವರನ್ನು ಗೌರವಿಸಲಾಗುವುದು. ಶಿಮಂತೂರು ಶಂಕರ್ ಮಾಸ್ತರ್ ಅಭಿನಂದನಾ ಭಾಷಣಗೈಯಲಿದ್ದು, ಕಕ್ವಗುತ್ತು ಆಶಿಸ್ ಶೆಟ್ಟಿ, ಮುಂಬೈ ಉದ್ಯಮಿ ಕುರುಂಬಿಲ್ ಹರೀಶ್ ಶೆಟ್ಟಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬೋಳೂರು: 14 ರಂದು ಸತ್ಯನಾರಾಯಣ ಪೂಜೆ

ಮಂಗಳೂರು: ಬೋಳೂರು ಮಾತಾ ಅಮೃತಾನಂದಮಯಿ ಮಠದಲ್ಲಿ ಏ. 14ರಂದು ಸಂಜೆ 5ಕ್ಕೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಏ. 11ರಂದು ಯುಗಾದಿ ಪ್ರಯುಕ್ತ ಸಂಜೆ 6ರಿಂದ 7ರತನಕ ಚಾಂದ್ರಾಮಾನ ಯುಗಾದಿ ಆಚರಿಸಲಾಗುವುದು. ಹೆಚ್ಚಿನ ಮಾಹಿತಿಗೆ 0824-2457056 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement