'ನೆಹರು ಮೈದಾನದಲ್ಲಿ ರಾಮೋತ್ಸವ ಮಂದಿರ ನಿರ್ಮಾಣ'
ಮಂಗಳೂರು: ವಿಶ್ವಹಿಂದು ಪರಿಷತ್ ಬಜರಂಗದಳ, ಮಾತೃಮಂಡಳಿ, ದುರ್ಗಾವಾಹಿನಿ ಸಂಘಟಿತರಾಗಿ ನಡೆಸುವ ಶ್ರೀರಾಮೋತ್ಸವ ಏ.19ರಿಂದ 21ರವರೆಗೆ ನೆಹರು ಮೈದಾನದಲ್ಲಿ ವೈಭವದಿಂದ ನಡೆಯಲಿದೆ.
19ರಂದು ಬೆಳಗ್ಗೆ ಸೀತಾರಾಮ ದೇವರ ಪ್ರತಿಷ್ಠೆ ನಡೆಯಲಿದೆ. ಸಂಜೆ 4 ಗಂಟೆ ನೃತ್ಯ ಭಜನೆ ಸ್ಪರ್ಧೆ ನಡೆಯಲಿದೆ. 3 ದಿನ ಪರ್ಯಂತ ನಡೆಯುವ ಧಾರ್ಮಿಕ ಸಭೆಯಲ್ಲಿ ನಾಡಿನ ಸ್ವಾಮೀಜಿಗಳು, ಗಣ್ಯರು ಭಾಗವಹಿಸುವರು ಎಂದು ಸಮಿತಿ ಅಧ್ಯಕ್ಷ ಪುಷ್ಪರಾಜ್ ಜೈನ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವರ್ಷದಂತೆ ಈ ಬಾರಿಯೂ ಅಂದಾಜು 3.5 ಲಕ್ಷ ವೆಚ್ಚದಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡಲಾಗುವುದು. 48 ಅಡಿ ಉದ್ದ, 60 ಅಡಿ ಅಗಲ ಇರಲಿದೆ. 20 ಅಡಿ ಧ್ವಜಸ್ತಂಭ, 22 ಅಡಿಎತ್ತರದ ರಾವಣ ಪ್ರತಿಕೃತಿ ನಿರ್ಮಿಸಲಾಗುವುದು. 21ರಂದ ಆಕರ್ಷಕ ಸುಡುಮದ್ದು ಪ್ರದರ್ಶನ ಮತ್ತು ರಾವಣ ದಹನ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀರಾಮತಾರಕ ಮಂತ್ರ ಸಾಮೂಹಿಕ ಪಠಣ ನಡೆಯಲಿದೆ.
ಬಹುಮಾನ: ನೃತ್ಯಭಜನೆ ಸ್ಪರ್ಧೆಯಲ್ಲಿ ಗೆದ್ದವರಿಗೆ ಕ್ರಮವಾಗಿ 10, 5, 3 ಸಾವಿರ ಬಹುಮಾನ ನೀಡಲಾಗುವುದು. ಆಸಕ್ತ ತಂಡಗಳು 9343201544 ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು.
ಸುದ್ದಿಗೋಷ್ಠಿಯಲ್ಲಿ ವಿಹಿಂಪ ಅಧ್ಯಕ್ಷ ಮನೋಹರ ತುಳಜಾರಾಮ್, ವಿಭಾಗ ಕಾರ್ಯಾಧ್ಯಕ್ಷ ಜಗದೀಶ ಶೇಣವ, ಕಾರ್ಯದರ್ಶಿ ಕೃಷ್ಣಮೂರ್ತಿ, ಬಜರಂಗದಳ ಮುಖಂಡರಾದ ಶರಣ್ ಪಂಪ್ವೆಲ್, ಭುಜಂಗ ಕುಲಾಲ್, ಶಿವಾನಂದ ಮೆಂಡನ್, ಸಮಿತಿ ಕೋಶಾಧಿಕಾರಿ ಜಿತೇಂದ್ರ ಕೊಟ್ಟಾರಿ ಇದ್ದರು.