ಯುವ ಉದ್ಯಮಿ ಬರ್ಬರ ಹತ್ಯೆ
ಮಂಗಳೂರು: ಭೂಗತ ಪಾತಕಿಗಳ ಪ್ರತೀಕಾರದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಗುಂಡು ಹಾರಿಸಿ, ಕತ್ತಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ವೆಲೆನ್ಸಿಯಾದ ಮಂಗಳಾ ಬಾರ್ ಮುಂದೆ ಸೋಮವಾರ ಮಧ್ಯರಾತ್ರಿ ನಡೆದಿದೆ. ಬಲ್ಮಠ ಆದಿನಾಥೇಶ್ವರ ರೋಡ್ಲೈನ್ಸ್ ಸಂಸ್ಥೆ ಉಸ್ತುವಾರಿ ಪಚ್ಚು ಯಾನೆ ಪ್ರಶಾಂತ (32) ಎಂಬವರು ಕೊಲೆಯಾದವರು. ರೋಡ್ಲೈನ್ಸ್ ಮಾಲೀಕ ಸುಜಿತ್ ಆಳ್ವರ ಟೋಯೋಟಾ ಫಾರ್ಚೂನ್ ಕಾರಿನಲ್ಲಿ ಮಂಗಳಾ ಬಾರ್ ಎದುರು ರಾತ್ರಿ 11.40ಕ್ಕೆ ಕಾರು ಹತ್ತುವಾಗ ಈ ಗುಂಡಿನ ದಾಳಿ ನಡೆಸಲಾಗಿದೆ.
ಆದರೂ ಕೀ ಬಳಸಿ ಕಾರು ಸ್ಟಾರ್ಟ್ ಮಾಡಲು ಪ್ರಶಾಂತ್ ಯತ್ನಿಸಿದ್ದು, ಅದು ಸಾಧ್ಯವಾಗಿಲ್ಲ.
ಆ ವೇಳೆಗೆ 7, 8 ಹಂತಕರು ಕಾರಿನ ಗ್ಲಾಸ್ ಪುಡಿ ಮಾಡಿ ತಲವಾರ್, ಲಾಂಗ್ ಮಚ್ಚುಗಳಿಂದ ದಾಳಿ ನಡೆಸತೊಡಗಿದಾಗ ಕಾರು ಬಿಟ್ಟು ಹೊರಗೆ ಓಡಿದ್ದಾರೆ. ಆಗಲೂ ತಲೆ ಮೇಲೆ ಕಲ್ಲೆತ್ತಿ ಹಾಕಿ ಹಂತಕರು ಪರಾರಿಯಾಗಿದ್ದಾರೆ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.