ಅಕ್ರಮ ಮರ ಸಾಗಾಟ ಪತ್ತೆ
ವಿಟ್ಲ: ಕನ್ಯಾನದ ಕರೋಪಾಡಿ ಗ್ರಾಮದದಲ್ಲಿ ಕೇರಳಕ್ಕೆ ಅಕ್ರಮವಾಗಿ ಮರ ಸಾಗಿಸುತ್ತಿದ್ದ ವಾಹನವನ್ನು ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡ ಘಟನೆ ಸೋಮವಾರ ನಡೆದಿದೆ.
ಕರೋಪಾಡಿ ಗ್ರಾಮದ ಆನೆಕಲ್ಲು ಮೂಲಕ ಪಿಕ್‌ಅಪ್ ವಾಹನದಲ್ಲಿ ಕೇರಳಕ್ಕೆ ಹಲಸಿನ ಮರದ 6 ದಿಮ್ಮಿಗಳನ್ನು ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಕನ್ಯಾನ ಶಾಖಾ ಉಪವಲಯ ಅರಣ್ಯಾಧಿಕಾರಿ ಪಿ.ಎಂ. ಕರಿಯಪ್ಪ ಅವರನ್ನೊಳಗೊಂಡ ತಂಡ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದೆ.
ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕ ರಾಮಚಂದ್ರ ಎ.ಪಿ., ಮಂಜುನಾಥ ಜಿ. ನಾಯ್ಕ, ರಾಜೇಂದ್ರ ಕುಮಾರ್ ಭಾಗವಹಿಸಿದ್ದರು.