ಅನಾರೋಗ್ಯ: ವೃದ್ಧ ನೇಣು ಬಿಗಿದು ಆತ್ಮಹತ್ಯೆ
ಮಂಗಳೂರು: ಮಂಗಳಾದೇವಿ ಮಂಕಿಸ್ಟ್ಯಾಂಡ್ ನಿವಾಸಿ ಗ್ಯಾಬ್ರಿಯಲ್ ಬಂಗೇರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಇತ್ತೀಚೆಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಫಲಕಾರಿಯಾಗದೆ ಮನೆಯಲ್ಲಿ ತೆವಳಿಕೊಂಡೆ ನಡೆಯುತ್ತಿದ್ದರು. ಇದರಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣು ಗಿದು ಆತ್ಮಹತ್ಯೆ ಮಾಡಿಕೊಂಡರು ಎಂದು ಮಗ ಸ್ಟಿಪನ್ ರಾಜೇಶ್ ಬಂಗೇರ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.
ಹೃದಯಾಘಾತದಿಂದ ಮೀನುಗಾರ ಸಾವು
ಮಂಗಳೂರು: ಕೋಟೆಪುರ ಅಳಿವೆಬಾಗಿಲಲ್ಲಿ ಬೋಟ್ ತೊಳೆಯುತ್ತಿದ್ದ ವೇಳೆ ಮೀನುಗಾರ ನವೀನ್ ಕುಮಾರ್ ಯಾನೆ ಶ್ರೀಕುಮಾರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಾಜೇಶ್ ಬಂಗೇರ, ಜಯನ್ ಬಂಗೇರ ಜತೆ ಸೋಮವಾರ ಮಧ್ಯಾಹ್ನ ಮೀನುಗಾರಿಕೆ ನಡೆಸಿದ ಬಳಿಕ ಬೋಟ್ ತೊಳೆಯುತ್ತಿದ್ದ ವೇಳೆ ಕುಮಾರ್ ನೀರಿಗೆ ಬಿದ್ದರು. ತಕ್ಷಣ ಮೇಲೆತ್ತಿದ್ದು, ಹೃದಯ ಬಡಿತದಲ್ಲಿ ವ್ಯತ್ಯಾಸ ವಾಗಿತ್ತು. ತಕ್ಷಣ ಆಸ್ಪತ್ರೆಗೆ ಒಯ್ದರು. ಆದರೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಆಕಾಶಭವನ ಶರಣ್ ಗ್ಯಾಂಗ್ಗೆ ಸುಪಾರಿ ?
ಮಂಗಳೂರು: ಪ್ರಶಾಂತ್ ಯಾನೆ ಪಚ್ಚು ಕೊಲೆಯನ್ನು ಆಕಾಶಭವನ ಶರಣ್ ಗ್ಯಾಂಗ್ ಮಾಡಿರಬಹುದು ಎಂಬ ಸುಳಿವು ಪಡೆದ ಪೊಲೀಸರು ಆರೋಪಿಗಳಿಗೆ ತೀವ್ರ ಶೋಧ ನಡೆಸುತ್ತಿದ್ದಾರೆ. ದುಬೈಯಲ್ಲಿರುವ ಚೋಟಾರಾಜನ್ ಬಂಟ ವಿಕ್ಕಿ ಶೆಟ್ಟಿಯಿಂದ ಸುಪಾರಿ ಪಡೆದು ಪ್ರಶಾಂತ್ ಶೆಟ್ಟಿಯನ್ನು ಕೊಲೆ ಮಾಡಿರುವ ಸಾಧ್ಯತೆಗಳಿವೆ. ಶರಣ್ ಸ್ಥಳೀಯವಾಗಿ ಸುಪಾರಿ ಕಿಲ್ಲರ್ ಆಗಿ ಪರಿವರ್ತನೆಯಾಗಿದ್ದಾನೆ. ಈತನ ವಿರುದ್ಧ 4 ಕೊಲೆ ಆರೋಪಗಳಿವೆ. ಬಿಜೈ ರಾಜನ ಸಹಚರರು ಈ ಕೃತ್ಯದಲ್ಲಿ ಪಾಲ್ಗೊಂಡಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಗೆಳೆಯರ ಪಟ್ಟಿ ಮಾಡುತ್ತಿದ್ದಾರೆ.
2 ಗುಂಡು: ಪ್ರಶಾಂತ್ನ ಎರಡು ಭುಜಗಳಲ್ಲಿ ಗುಂಡು ಹೊಕ್ಕಿದೆ. ಗುಂಡೇಟು ಬಿದ್ದ ಬಳಿಕ ಚಾಲಕ ಸೀಟಿನಿಂದ ಹಿಂದಿನ ಸೀಟಿಗೆ ಹೋದಾಗ ಹಂತಕರು ಹಲ್ಲೆ ಮುಂದುವರಿಸಿದ್ದಾರೆ. ಹೊರ ಬಂದ ಓಡುವಾಗಲೂ ತಲವಾರ್, ಲಾಂಗ್ಗಳಿಂದ ಹಲ್ಲೆ ನಡೆಸಿದ್ದಾರೆ.
ರಿಕ್ಷಾ ಪಲ್ಟಿ: ಚಾಲಕನಿಗೆ ಗಾಯ
ಸುಳ್ಯ: ರಿಕ್ಷಾವೊಂದು ಪಲ್ಟಿ ಹೊಡೆದು ಚಾಲಕ ಗಾಯಗೊಂಡ ಘಟನೆ ಸುಳ್ಯ ನಗರದಲ್ಲಿ ಸಂಭವಿಸಿದೆ.
ಬಸ್ ನಿಲ್ದಾಣ ಕಡೆಯಿಂದ ಶ್ರೀರಾಂ ಪೇಟೆಯತ್ತ ಹೋಗುತ್ತಿದ್ದ ರಿಕ್ಷಾ ಶ್ರೇಯಸ್ ಕಾಂಪ್ಲೆಕ್ಸ್ನ ಮುಂಭಾಗದಲ್ಲಿ ಪಲ್ಟಿ ಹೊಡೆದು ಚಾಲಕ ಜೋಗಿಯಡ್ಕದ ಮೋಹನ ಎಂಬವರು ಗಾಯಗೊಂಡಿದ್ದಾರೆ.
ಅಪಘಾತ: ಬೈಕ್ ಸವಾರನಿಗೆ ಗಾಯ
ಸುಳ್ಯ: ಬೈಕ್ಗೆ ಕಾರೊಂದು ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.ಕೇರ್ಪಳದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಿಂದ ಹಿಂದಿರುಗುತ್ತಿದ್ದ ಪುಂಣ್ಚತ್ತಾರಿನ ಜಯಂತ ಎಂಬವರು ಚಲಾಯಿಸುತ್ತಿದ್ದ ಕಾರು ದೇವಪ್ಪ ಎಂಬವರು ಚಲಾಯಿಸುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ದೇವಪ್ಪ ಅವರಿಗೂ ತಲೆಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ರಿಕ್ಷಾ, ಟಿಪ್ಪರ್ ಡಿಕ್ಕಿ: ಟ್ಯಾಂಕರ್ ದುರಂತ
ನೋಡಲು ಹೋದವರಿಬ್ಬರಿಗೆ ಗಂಭೀರ ಗಾಯ
ಬಂಟ್ವಾಳ: ರಿಕ್ಷಾವೊಂದಕ್ಕೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ಕಲ್ಲಡ್ಕ ಸಮೀಪದ ಪೂರ್ಲಿಪ್ಪಾಡಿಯಲ್ಲಿ ಮಂಗಳವಾರ ನಡೆದಿದೆ. ಗಾಯಗೊಂಡವರನ್ನು ಕಲ್ಲಡ್ಕ ನಿವಾಸಿಗಳಾದ ರಾಜೇಶ್ ಹಾಗೂ ಕರುಣಾಕರ ಎಂದು ಗುರುತಿಸಲಾಗಿದೆ. ಪೆರ್ನೆಯಲ್ಲಿ ನಡೆದಿದ್ದ ಟ್ಯಾಂಕರ್ ದುರಂತವನ್ನು ನೋಡಲೆಂದು ರವಿ ಎಂಬವರು ಚಲಾಯಿಸುತ್ತಿದ್ದ ರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ರಿಕ್ಷಾದಲ್ಲಿ ರಾಜೇಶ್, ಕರುಣಾಕರ ಹಾಗೂ ಚಂದ್ರಹಾಸ ಎಂಬವರು ಪಯಣಿಸುತ್ತಿದ್ದರು. ರಿಕ್ಷಾ ಪೂರ್ಲಿಪ್ಪಾಡಿ ತಲುಪುತ್ತಿದ್ದಂತೆಯೇ ಎದುರಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಘಟನೆಯ ತೀವ್ರತೆಗೆ ರಿಕ್ಷಾದಲ್ಲಿ ಪಯಣಿಸುತ್ತಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಮಂಗಳೂರು ಆಸ್ಪತ್ರೆಯೆ ದಾಖಲಿಸಲಾಗಿದೆ. ಬಂಟ್ವಾಳ ನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.