ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭ
ಮಂಗಳೂರು: ಮೇ 5ರಂದು ನಡೆಯುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಏ.10ರಿಂದ ಶುರುವಾಗಿದೆ. 17ರಂದು ನಾಮಪತ್ರ ಸಲ್ಲಿಕೆಗೆ ಕೊನೆದಿನ. 18ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, 20ರಂದು ನಾಮಪತ್ರ ಹಿಂತೆಗೆತಕ್ಕೆ ಕೊನೆದಿನ. ಮೇ 5ರಂದು ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ಚುನಾವಣೆ ನಡೆಯಲಿದೆ. ಮೇ 8ರಂದು ಮತಎಣಿಕೆ ನಡೆಯುವುದು.
ಏ.10ರಿಂದ 17ರ ವರೆಗೆ ರಜಾ ದಿನ ಹೊರತುಪಡಿಸಿ ಬೆಳಗ್ಗೆ 11ರಿಂದ ಸಂಜೆ 3ರ ವರೆಗೆ ಈ ಕೆಳಗಿನ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದು. ಸಾರ್ವಜನಿಕರು ಮತ್ತು ರಾಜಕೀಯ ಪಕ್ಷಗಳು ನಾಮಪತ್ರ ನಮೂನೆಯನ್ನು ಪಡೆಯುವ ಬಗ್ಗೆ ಮತ್ತು ನಾಮಪತ್ರ ಸಲ್ಲಿಸಲು ಈ ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಬೆಳ್ತಂಗಡಿ ತಾಲೂಕು ಕಚೇರಿ-ಯೋಗೀಶ್ ಎಚ್.ಆರ್.(9448999226), ಮೂಡುಬಿದಿರೆ ವಿಶೇಷ ತಹಸೀಲ್ದಾರ್ ಕಚೇರಿ-ಸಿ.ನಾಗರಾಜ(9986232225), ಮಂಗಳೂರು ಉತ್ತರಕ್ಕೆ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಉರ್ವಾಸ್ಟೋರ್-ಅಜಿತ್ ಕುಮಾರ್ ಹೆಗ್ಡೆ(9449559122), ಮಂಗಳೂರು ದಕ್ಷಿಣಕ್ಕೆ ಮಹಾನಗರ ಪಾಲಿಕೆ ಜಂಟಿ ಆಯುಕ್ತರ ಕಚೇರಿ-ಶ್ರೀಕಾಂತ್ ರಾವ್(9449113635), ಮಂಗಳೂರುಕ್ಷೇತ್ರಕ್ಕೆ ಸಹಾಯಕ ಕಮೀಷನರ್ ಕಚೇರಿ-ಸದಾಶಿವ ಪ್ರಭು(9448169434), ಬಂಟ್ವಾಳ ತಾಲೂಕು ಕಚೇರಿ-ಶಶಿಧರ(9480862001), ಸಹಾಯಕ ಕಮೀಷನರ್ ಪುತ್ತೂರು-ಪ್ರಸನ್ನ(99024227221), ತಾಲೂಕು ಕಚೇರಿ ಸುಳ್ಯ-ಶರಣ ಬಸಪ್ಪ(9448013217).