ಕೊಲ್ಲೂರಿಗೆ ರೇವಣ್ಣ ದಂಪತಿ
ಕುಂದಾಪುರ: ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಮಂಗಳವಾರ ಕೊಲ್ಲೂರು ಶ್ರೀಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ನವಗ್ರಹ ಚಂಡಿಕಾ ಯಾಗ ನೆರವೇರಿಸಿದರು. ಪತ್ನಿ ಭವಾನಿ ಜೊತೆಗಿದ್ದರು.
ಪ್ರತಿವರ್ಷ ರೇವಣ್ಣ ಕೊಲ್ಲೂರಿಗೆ ಆಗಮಿಸಿ ಚಂಡಿಕಾಯಾಗ ನಡೆಸುತ್ತಾರೆ. ಆದರೆ ಈ ಬಾರಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅವರು ಕೊಲ್ಲೂರಿಗೆ ಭೇಟಿ ನೀಡಿರುವುದು ವಿಶೇಷ. ಅಲ್ಲದೇ ಈ ಬಾರಿ ಅವರ ಪೂಜೆ, ಭೇಟಿಯ ಫೋಟೋಗಳನ್ನು ತೆಗೆಯುವುದಕ್ಕೆ ಮಾಧ್ಯಮಗಳಿಗೆ ಅವಕಾಶ ನೀಡಲಿಲ್ಲ, ರೇವಣ್ಣ ಮಾಧ್ಯಮದವರೊಂದಿಗೆ ಮಾತನಾಡುವುದಕ್ಕೂ ನಿರಾಕರಿಸಿದರು.