ಆಟೋ ರಿಕ್ಷಾ ಪಲ್ಟಿ: ಮಹಿಳೆಗೆ ಗಾಯ
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಲಾವತ್ತಡ್ಕ ಬಳಿ ಅಟೋ ರಿಕ್ಷಾವೊಂದು ಪಲ್ಟಿಯಾಗಿ ರಿಕ್ಷಾದಲ್ಲಿದ್ದ ಅಂಬಿಲಿ (50) ಎಂಬ ಮಹಿಳೆ ತೀವ್ರ ಗಾಯಗೊಂಡ ಘಟನೆ ಬುಧವಾರ ಸಂಜೆ ನಡೆದಿದೆ.
ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಶಿರಾಡಿಯ ಆಟೋ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು ಆಟೋದಲ್ಲಿದ್ದ ಇತರ ಪ್ರಯಾಣಿಕರಿಗೂ ಅಲ್ದಪ ಸ್ವಲ್ಪ ಗಾಯಗಳಾಗಿದ್ದು ಪಾರಾಗಿದ್ದಾರೆ. ಗಾಯಾಳು ಅಂಬಿಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ. ನೆಲ್ಯಾಡಿ ಹೊರಠಾಣಾ ಪೋಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.