ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಒಂಟಿತನ ತಾಳದೆ ಮಹಿಳೆ ಆತ್ಮಹತ್ಯೆ

Vishwanath S
Updated On : 11 Apr 2013, 12:53 pm

ಮಲ್ಪೆ: ಇಲ್ಲಿನ ಕೆಮ್ಮಣ್ಣು ಗ್ರಾಮದಲ್ಲಿ ಮಹಿಳೆಯೊಬ್ಬರು ಒಬ್ಬಂಟಿತನ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮೃತರು ಗಿರಿಜಾ ಗಾಣಿಗ, ಅವರು ಕೆಮ್ಮಣ್ಣಿನಲ್ಲಿ ತಮ್ಮ ಮನೆಯಲ್ಲಿ ಒಬ್ಬಂಟಿಗಳಾಗಿ ಜೀವನ ಮಾಡುತ್ತಿದ್ದು, ಅವರ ಮಕ್ಕಳೆಲ್ಲಾ ಬೇರೆ ಸ್ಥಳಗಳಲ್ಲಿ ವಾಸವಿದ್ದಾರೆ. ಅವರ ಆರೋಗ್ಯ ಕೂಡ ಸರಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಜೀವನದಲ್ಲಿ ಜಿಗುಪ್ಸೆ ತಾಳಿ ಮಂಗಳವಾರ ರಾತ್ರಿ ತನ್ನ ಮನೆಯ ಅಡುಗೆ ಕೋಣೆಯಲ್ಲಿ ಹುರಿ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಕಂಬಕ್ಕೆ ಓಮ್ನಿ ಡಿಕ್ಕಿ
ಸುಳ್ಯ:
ಪೈಚಾರು- ಸೋಣಂಗೇರಿ ರಸ್ತೆಯಲ್ಲಿ ಓಮ್ನಿಯೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡಿದಿದೆ. ಸವಣೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಕಾರ್ಯಪ್ಪ ಮೈಸೂರು ಎಂಬವರ ಮಾರುತಿ ಓಮ್ನಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬ ತುಂಡಾಗಿದೆ. ಕಾರ್ಯಪ್ಪಗೆ ಸಣ್ಣಪುಟ್ಟ ಗಾಯಗಳಾಗಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೆರೆಗೆ ಬಿದ್ದು ಸಾವು
ಮಗಳೂರು:
ಮೂಳೂರು ಗುರುಪುರ ಕಾರಮೊಗರು ಕೆರೆಗೆ ಬಿದ್ದು ರಾಮಕೃಷ್ಣ ಪೂಂಜಾ (51) ಮೃತಪಟ್ಟಿದ್ದಾರೆ. ಸಾರಾಯಿ ಕುಡಿತ ಚಟವಿದ್ದ ಪೂಂಜಾ ಮಂಗಳವಾರ ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೋದವರು ಬುಧವಾರ ಮಧ್ಯಾಹ್ನ ವರೆಗೆ ನಾಪತ್ತೆಯಾಗಿದ್ದರು. ಮಧ್ಯಾಹ್ನ ಕೆರೆಯಲ್ಲಿ  ಶವ ಪತ್ತೆಯಾಯಿತು. ಅಕಸ್ಮಾತ್ ಕೆರೆಗೆ ಜಾರಿಯೋ ಅಥವಾ ಹಾರಿಯೊ ಮೃತಪಟ್ಟಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಕಿಟ್ಟಣ್ಣ ರೈ ನೀಡಿದ ದೂರಿನಂತೆ ಬಜಪೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement