ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕೊಡಿಯಾಲಬೈಲು; ಅಕ್ರಮ ಗುಡಿಸಲು ತೆರವು

Vishwanath S
Updated On : 11 Apr 2013, 12:53 pm

ಸುಳ್ಯ: ಕೊಡಿಯಾಲಬೈಲಿನ ಸ್ಮಶಾನಕ್ಕೆ ಹೋಗುವ ಸರ್ಕಾರಿ ಜಾಗದಲ್ಲಿ ವ್ಯಕ್ತಿಯೊಬ್ಬರು ಅಕ್ರಮವಾಗಿ ನಿರ್ಮಿಸಿದ ಗುಡಿಸಲನ್ನು ಕಂದಾಯ ಇಲಾಖೆಯವರು ತೆರವುಗೊಳಿಸಿದ್ದಾರೆ. ಕೊಡಿಯಾಲಬೈಲು ನಿವಾಸಿ, ಸುಳ್ಯ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ರವಿಚಂದ್ರ ಎಂಬವರು ಸ್ಮಶಾನಕ್ಕೆ ಹೋಗುವ ದಾರಿಯಲ್ಲಿ ಅಕ್ರಮವಾಗಿ ಗುಡಿಸಲು ನಿರ್ಮಿಸಿದ್ದಾರೆಂದು ಸ್ಥಳೀಯ ಕೆಲವರು ಜಿಲ್ಲಾಧಿಕಾರಿಗಳಿಗೆ ಮತ್ತು ಕಂದಾಯ ಇಲಾಖೆಗೆ ದೂರು ನೀಡಿದ್ದರು. ಗುಡಿಸಲನ್ನು ತೆರುಗೊಳಿಸುವಂತೆ ಕಂದಾಯ ಇಲಾಖೆಯವರು ರವಿಚಂದ್ರರಿಗೆ ಸೂಚಿಸಿದ್ದರು. ಆದರೆ ಅವರು ತೆರವುಗೊಳಿಸದೇ ಇದ್ದುದರಿಂದ ಬುಧವಾರ ಮಧ್ಯಾಹ್ನ ಕಂದಾಯ ಇಲಾಖೆಯವರು ಪೊಲೀಸ್ ರಕ್ಷಣೆಯೊಂದಿಗೆ ಗುಡಿಸಲು ತೆರವುಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement