ಗೂಬೆ ಬದುಕಿಸಿದ ಶೇಖರ್!
ಶನಿವಾರಸಂತೆ: ಇಲ್ಲಿಗೆ ಸಮೀಪದ ಆಲೂರು ಸಿದ್ದಾಪುರದಲ್ಲಿ ಆಕಸ್ಮಿಕವಾಗಿ ಗಾಯಗೊಂಡ ಗೂಬೆಯೊಂದನ್ನು ಗಮನಿಸಿದ ಅಲ್ಲಿನ ನಿವಾಸಿಗಳು ಗಾಯಗೊಂಡ ಗೂಬೆಗೆ ಸಮೀಪದ ಪಶುವೈದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಕಾಡಿಗೆ ಬಿಟ್ಟಿದ್ದಾರೆ. ಆಲೂರು ಸಿದ್ದಾಪುರದ ನಿವಾಸಿ ಶೇಖರ್ ಎಂಬವರು ಮುಖ್ಯ ರಸ್ತೆಯಲ್ಲಿ ಗೂಬೆಯೊಂದು ರೆಕ್ಕೆಗೆ ಗಾಯಗೊಂಡು ನರಳುತ್ತಿರುವುದನ್ನು ಗಮನಿಸಿದ್ದಾರೆ. ಬಳಿಕ ಅದೇ ಗ್ರಾಮದ ಶಿವಪ್ರಕಾಶ ಎಂಬವರ ನೆರವಿನಿಂದ ಗಾಯಗೊಂಡ ಗೂಬೆಗೆ ಪಶುವೈದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಪಕ್ಕದಲ್ಲಿರುವ ಅರಣ್ಯದಲ್ಲಿ ಅದನ್ನು ಹಾರಲು ಬಿಟ್ಟು ಮಾನವೀಯತೆ ಮೆರೆದಿದ್ದಾರೆ.