ವಿಠಲ ಶೆಟ್ಟಿಗೆ ಪಾತಾಳ ಪ್ರಶಸ್ತಿ
ಮಂಗಳೂರು: ಎಡನೀರು ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ ವತಿಯಿಂದ ನೀಡಲಾಗುವ ಪಾತಾಳ ಪ್ರಶಸ್ತಿಗೆ ನೃತ್ಯಗುರು ಮಾಸ್ಟರ್ ವಿಠಲ ಶೆಟ್ಟಿ ಆಯ್ಕೆಯಾಗಿದ್ದಾರೆ. ಏ.14ರಂದು ಎಡನೀರು ಮಠದ ಕೃಷ್ಣ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು ಎಂದು ಪ್ರತಿಷ್ಠಾನದ ಅಧ್ಯಕ್ಷ ಹರಿಕೃಷ್ಣ ಪುನರೂರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ವರ್ಷಕ್ಕೊಮ್ಮೆ ಹಿರಿಯ ಕಲಾವಿದರನ್ನು ಗುರುತಿಸಿ ನೀಡಲಾಗುವು ಪಾತಾಳ ಪ್ರಶಸ್ತಿಯು 5ಸಾವಿರ ನಗದು, ಸ್ಮರಣಿಕೆ, ಪತ್ರ ಒಳಗೊಂಡಿದೆ.