ಹೋಮ್ಸ್ಟೇ ದಾಳಿ: ಅಪ್ರಾಪ್ತಗೆ ಜಾಮೀನು
ಮಂಗಳೂರು: ಹೋಮ್ಸ್ಟೇ ದಾಳಿ ಆರೋಪಿ ಅಪ್ರಾಪ್ತ ಯುವಕ ಪುನೀತ್ಗೆ ನ್ಯಾಯಾಲಯ ಜಾಮೀನು ಮಂಜೂರ ಮಾಡಿದೆ. ವಕೀಲ ವಾಸುದೇವ ಗೌಡ ಅಪ್ರಾಪ್ತ ಆರೋಪಿ ಪರವಾಗಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಬುಧವಾರ ವಿಚಾರಣೆ ನಡೆಯಿತು. 17 ವರ್ಷದ ಪುನೀತ್ ಅಪ್ರಾಪ್ತ ಎಂದು ಸಹೋದರಿ ತಿಂಗಳ ಹಿಂದೆ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದರು. ಬಳಿಕ ವಿಚಾರಣೆ ನಡೆಸಿದಾಗ ಪುನೀತ್ ಅಪ್ರಾಪ್ತ ಎಂದು ಸಾಬೀತಾಗಿತ್ತು. ಅದುವರೆಗೆ ಜೈಲ್ನಲ್ಲಿದ್ದ ಪುನೀತ್ನನ್ನು ರಿಮಾಂಡ್ ಹೋಮ್ಗೆ ಸ್ಥಳಾಂತರಿಸಲಾಗಿತ್ತು. ಯುವಕನ ಹೆತ್ತವರು ಜನ್ಮದಿನಾಂಕದ ಬಗ್ಗೆ ಮೂಲ ದಾಖಲೆ ಕೋರ್ಟ್ಗೆ ಹಾಜರು ಪಡಿಸಿದ್ದರು. ದಾಖಲೆಗಳು ಕ್ರಮಬದ್ಧವಾಗಿದ್ದವು. 'ಪೊಲೀಸರು ದಾಖಲೆ ಪರಿಶೀಲಿಸದೆ ಒಟ್ಟಾರೆ ಅವರಿಗೆ ಮನಸ್ಸಿಗೆ ಬಂದ ಹಾಗೆ ವಯಸ್ಸು ಬರೆದಿದ್ದಾರೆ. ಇದು ಬಾಲಕನ ಹಕ್ಕಿನ ಉಲ್ಲಂಘನೆಯಾಗಿದೆ. ನಮ್ಮ ಗಮನಕ್ಕೆ ಬಂದ ಬಳಿಕ ಇದನ್ನು ನ್ಯಾಯಾಲಯ ಗಮನಕ್ಕೆ ತಂದೆವು. ಇದೇ ಆಧಾರದಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗಿದೆ ' ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಆಶಾ ನಾಯಕ್ ತಿಳಿಸಿದರು.