ಕುಲ್ಕುಂದದಲ್ಲಿ ಮತದಾರರ ಜಾಗೃತಿ ಸಭೆ
ಸುಬ್ರಹ್ಮಣ್ಯ: ಪ್ರಜಾಭುತ್ವದಲ್ಲಿ ನಂಬಿಕೆಯೊಂದಿಗೆ ಆಸಕ್ತಿ ಹೆಚ್ಚಾಗಬೇಕು. ಇತ್ತೀಚೆಗೆ ಮತದಾನದಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹಿಂದೆ ಇಲ್ಲಿ ನಕ್ಸಲ್ ಸಮಸ್ಯೆ ಆರಂಭವಾಗಿತ್ತು. ಈಗ ಇಲ್ಲ ಆದರೂ ಮತದಾರರಿಗೆ ಧೈರ್ಯ ತುಂಬಿ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ. ಮತದಾರರು ಯಾವುದೇ ಗಾಳಿ ಸುದ್ದಿಗೆ ಕಿವಿಗೊಡಬೇಡಿ. ಯಾರೂ ಭಯಪಡುವ ಅಗತ್ಯ ಇಲ್ಲ. ಯಾವುದೇ ಅಹಿತಕರ ಘಟನೆ ಆಗದಂತೆ ಮುಂಜಾಗ್ರತಾ ಕ್ರಮವಾಗಿ ಕುಲ್ಕುಂದ ಮತದಾನ ಕೇಂದ್ರಕ್ಕೆ ಅರೆ ಸೈನಿಕ ದಳ ಹಾಕಲಾಗುವುದು. ಮತದಾರರು ಮತಗಟ್ಟೆಗೆ ಹೋಗಿ ನಿರ್ಭೀತರಾಗಿ ಮತಚಲಾಯಿಸಿ ಎಂದು ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ಸುದರ್ಶನ್ ಹೇಳಿದರು.
ಕುಲ್ಕುಂದ ಸ.ಕಿ.ಪ್ರಾ. ಶಾಲೆಯಲ್ಲಿ ಶುಕ್ರವಾರ ನಡೆದ ಮತದಾರರ ಜಾಗೃತಿ ಸಭೆಯಲ್ಲಿ ಮಾತನಾಡಿದರು. ನಂತರ ಸುಳ್ಯ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಲ್ಲೇಸ್ವಾಮಿ ಮಾತನಾಡಿ ಈ ಹಿಂದೆ ಅತೀ ಹೆಚ್ಚು ಮತದಾನ ಆಗಿದ್ದು ತಾಲೂಕಿನಲ್ಲಿ ಇನ್ನು ಮತದಾರ ಮನೆಮನೆಗೆ ಅಧಿಕಾರಿ ಸಿಬ್ಬಂದಿ ಬಂದು ಮತದಾನದ ಚೀಟಿ ನೀಡುವವರು. ಯಾವುದೇ ಪಕ್ಷ ಮತದಾನ ಚೀಟಿ ಕೊಡುವುದನ್ನು ಚುನಾವಣಾ ಆಯೋಗ ನಿಷೇಧಿಸಿದೆ. ಅಪರಿಚಿತರ ಬಗ್ಗೆ ನಿಗಾವಹಿಸಿ ಸಮಾಜ ಘಾತುಕ ಶಕ್ತಿಗಳಿಗೆ ಶೇ.100 ಮತದಾನ ಮಾಡುವ ಮೂಲಕ ಉತ್ತರ ನೀಡಿ.ನಮ್ಮ ಮತಗಳನ್ನು ನಾವು ನಿರ್ಭಯವಾಗಿ ಯೋಗ್ಯ ವ್ಯಕ್ತಿಗಳಿಗೆ ಚಲಾಯಿಸಿ ನಮ್ಮ ಹಕ್ಕನ್ನು ಕಾರ್ಯಗತ ಮಾಡುವ ಎಂದು ಹೇಳಿದರು.
ಕುಲ್ಕುಂದ ಗ್ರಾಮಸ್ಥರಾದ ತಂಗಮ್ಮ ವೆಂಕಟೇಶ್, ಮೀನಾಕ್ಷಿಯವರು ತಮ್ಮ ಮನೆಗಳಿಗೆ ವಿದ್ಯುತ್,ನೀರಿನ ವ್ಯವಸ್ಥೆ ಇಲ್ಲದಿದ್ದುರಿಂದ ಮಾಡಿ ಕೊಡಿ ಎಂದು ತಮ್ಮ ಅಹವಾಲನ್ನು ಮುಂದಿಟ್ಟರು. ನಕ್ಸಲ್ಪೀ ಡಿತ ಪ್ರದೇಶ ಪಳ್ಳಿಗದ್ದೆ ದಾರಿಯಲ್ಲಿ ದಾರಿ ದೀಪಗಳು ಉರಿಯುತ್ತಿಲ್ಲ ಎಂದು ಬೆಳ್ಯಪ್ಪ ಗೌಡ ಹಾಗೂ ನೀಲಪ್ಪ ಗೌಡ ತಿಳಿಸಿದರು.
ವೇದಿಕೆಯಲ್ಲಿ ಸೆಕ್ಟರ್ ಅಧಿಕಾರಿ: ನಂಜೇಗೌಡ, ಸುಬ್ರಹ್ಮಣ್ಯ ಗ್ರಾ.ಪಂ. ಪ್ರಭಾರ ಪಿ.ಡಿ.ಓ ಮೋನಪ್ಪ ಉಪಸ್ಥಿತರಿದ್ದರು. ಸಭೆಯಲ್ಲಿ ಸುಬ್ರಹ್ಮಣ್ಯ ಪೋಲಿಸ್ ಠಾಣಾಧಿಕಾರಿ ಕುಶಾಲಪ್ಪ ಗೌಡ, ಗ್ರಾ.ಪಂ ಸದಸ್ಯರಾದ ನಾರಾಯಣ ಆಗ್ರಹಾರ, ಸುಲೋಚನ,ಪ್ರೇರಕಿ ಸ್ಮಿತರಾವ್, ಶಾಲಾ ಮುಖ್ಯ ಶಿಕ್ಷಕಿ ಲೀಲಾಕುಮಾರಿ. ಟಿ, ಗ್ರಾಮಸ್ಥರಾದ ರವಿಶೆಟ್ಟಿ, ಶಿವರಾಮ ಗೌಡ, ಪದ್ಮಯ್ಯ ಗೌಡ.ಎ.ಪಿ. ಗೌಡ, ಮೇದಪ್ಪ ಗೌಡ, ರಾಮಪ್ಪ ಗೌಡ ಮುಂತಾದವರು ಹಾಜರಿದ್ದರು.
--