ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ದ.ಕ.ಜಿಲ್ಲೆಯ 7 ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಸ್ಪರ್ಧೆ

Lingaraj Badiger
Updated On : 13 Apr 2013, 11:47 am

ಮಂಗಳೂರು: ದ.ಕ.ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಸ್ಪರ್ಧಿಸಲಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
 ದಲಿತ ಪರ ಹೋರಾಟಗಾರ ಕೂಸಪ್ಪ ಸುಳ್ಯದಲ್ಲಿ, ಬಂಟ್ವಾಳದಲ್ಲಿ ವಕೀಲ ಅಬ್ದುಲ್ ಮಜೀದ್‌ಖಾನ್, ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಅಹಿಂದ ಡಾಟ್ ಕಾಂ ಇಂಗ್ಲಿಷ್-ಕನ್ನಡ ಅಂತರ್ಜಾಲ ಸಂಪಾದಕ ಅಕ್ರಮ್ ಹಸನ್, ಮಂಗಳೂರು ದಕ್ಷಿಣದಲ್ಲಿ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಜಲೀಲ್, ಮಂಗಳೂರು ಉತ್ತರದಲ್ಲಿ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ, ಮೂಡುಬಿದಿರೆಯಲ್ಲಿ ಎಂಜಿನಿಯರ್ ಇಸ್ಮಾಯಿಲ್ ಹಾಗೂ ಪುತ್ತೂರಿನಲ್ಲಿ ಅಬೂಬಕ್ಕರ್ ಸಿದ್ದಿಕ್ ಸ್ಪರ್ಧಿಸುವರು.
 ಜಿಲ್ಲೆಯಲ್ಲಿ 6 ಸೇರಿದಂತೆ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಸ್‌ಡಿಪಿಐ 17 ಸ್ಥಾನಗಳಲ್ಲಿ ಸ್ಪರ್ಧಿಸಿ ಜಯಗಳಿಸಿದೆ. ರಾಜ್ಯದ 68 ಗ್ರಾಮ ಪಂಚಾಯ್ತಿಗಳಲ್ಲಿ ನಮ್ಮ ಸದಸ್ಯರಿದ್ದಾರೆ. ಈ ಅಭ್ಯರ್ಥಿಗಳು ಪಕ್ಷದ ಆಟೋರಿಕ್ಷಾ ಚಿನ್ನೆಯಡಿ ಸ್ಪರ್ಧಿಸಲಿದ್ದಾರೆ. ಸಾಮಾಜಿಕ ಹೋರಾಟ ಹಿನ್ನಲೆ, ಪಕ್ಷ ಸಿದ್ಧಾಂತ ಬದ್ಧತೆ ಇರುವವರಿಗೆ ಟಿಕೆಟ್ ನೀಡಿದ್ದು, ವ್ಯಭಿಚಾರಿ, ಭ್ರಷ್ಟಾಚಾರಿಗಳಿಗೆ ಟಿಕೆಟ್ ಇಲ್ಲ ಎಂದರು.  ಈ ಬಾರಿ ರಾಜ್ಯದಲ್ಲಿ ಬಹುಜನ ಸಮಾಜವಾದಿ ಪಕ್ಷ ಜತೆ ಹೊಂದಾಣಿಕೆ ಮಾಡಿದ್ದು, ಮಾಯಾವತಿ ಕೂಡ ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement