ನೀತಿ ಸಂಹಿತೆ ಉಲ್ಲಂಘನೆ: ಗುತ್ತಿಗೆದಾರನ ವಿರುದ್ಧ ಕೇಸು
ಕ.ಪ್ರ. ವಾರ್ತೆ ,ಸುಳ್ಯ ,ಏ.12
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಅಧಿಕ ಮೊತ್ತದ ಹಣ ಡ್ರಾ ಮಾಡಿ ಸಾಗಿಸುತ್ತಿದ್ದ ಗುತ್ತಿಗೆದಾರನೊಬ್ಬನ ವಿರುದ್ಧ ಸುಳ್ಯ ಪೊಲೀಸರು ಕೇಸು ದಾಖಲಿಸಿದ್ದಾರೆ.
ಸುಳ್ಯದ ಗುತ್ತಿಗೆದಾರ, ಬಿಜೆಪಿ ಬೆಂಬಲಿಗ ಗೋಪಾಲಕೃಷ್ಣ ಎಂಬವರು ಶುಕ್ರವಾರ ಸುಳ್ಯದ ಸಿಂಡಿಕೇಟ್ ಬ್ಯಾಂಕ್ನ ಶಾಖೆಯಿಂದ 8 ಲಕ್ಷವನ್ನು ಡ್ರಾ ಮಾಡಿ ತನ್ನ ಕಾರಿನಲ್ಲಿರಿಸಿಕೊಂಡಿದ್ದರು.
ಕಾರನ್ನು ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುದುದರಿಂದ ಪೊಲೀಸ್ ಸಿಬ್ಬಂದಿ ಬಂದು ಕಾರು ಪರಿಶೀಲಿಸಿದಾಗ ಹಣವಿರುವುದು ಪತ್ತೆಯಾಗಿದೆ.
ವಾಹನ ಸಮೇತ ಗೋಪಾಲಕೃಷ್ಣ ಅವರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಈ ಕುರಿತು ವಿಚಾರಣೆ ನಡೆಸಿದರು.
ತನಗೆ ಈ ಹಣ ಕೆಆರ್ಡಿಸಿಎಲ್ ಖಾತೆಯಿಂದ ಬಂದಿರುವುದಾಗಿಯೂ ಮಡಿಕೇರಿಯಲ್ಲಿ ನಡೆಯುತ್ತಿರುವ ಕಾಮಗಾರಿಯ ಕಾರ್ಮಿಕರಿಗೆ ಸಂಬಳ ನೀಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ಗೋಪಾಲಕೃಷ್ಣ, ದಾಖಲೆ ಸಲ್ಲಿಸಿದರಾದರೂ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು.