ನೀರಲ್ಲಿ ಮುಳುಗಿ ಇಬ್ಬರ ಸಾವು
ಬಂಟ್ವಾಳ: ತಾಲೂಕಿನ ವಗ್ಗ ಸಮೀಪದ ಕಾರಿಂಜದ ಶ್ರೀ ಕಾರಿಂಜೇಶ್ವರ ದೇವಾಲಯದ ಕೆರೆಗೆ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಮೃತರನ್ನು ಪರ್ಲ ನಿವಾಸಿಗಳಾದ ಥಾಮಸ್ ಎಂಬವರ ಪುತ್ರ ಆತ್ವಿನ್ ಡಿ ಮೆಲ್ಲೊ (21) ಮತ್ತು ಜಾನ್ ಅವರ ಪುತ್ರ ರೋಶನ್ ಲಸ್ರಾದೊ(17) ಎಂದು ಗುರುತಿಸಲಾಗಿದೆ. ಆತ್ವಿನ್ ಬಂಟ್ವಾಳ ಕೆಪಿಟಿಯ ಐಟಿಐ ವಿದ್ಯಾರ್ಥಿ ಹಾಗೂ ಐಸಿವೈಎಂ ಪರ್ಲ ಟ್ರಸ್ಟ್ನ ಅಧ್ಯಕ್ಷ. ರೋಶನ್ ಮೊಡಂಕಾಪು ದೀಪಿಕಾ ಕಾಲೇಜಿನ ಪಿಯುಸಿ ವಿದ್ಯಾರ್ಥಿ.