ಪೊಲೀಸ್ ಮಾಹಿತಿ ಶಂಕೆ: ಕೈದಿ ಮೇಲೆ ರಶೀದ್ ಮಲ್ಬಾರಿ ಗ್ಯಾಂಗ್ ಹಲ್ಲೆ
ಮಂಗಳೂರು: ಪೊಲೀಸ್ ಮಾಹಿತಿ ನೀಡುವ ಶಂಕೆಯಲ್ಲಿ ಜೈಲ್ನಲ್ಲಿರುವ ಕಳವು ಆರೋಪಿ ಮುನೀರ್ ಮೇಲೆ ಕುಖ್ಯಾತ ಪಾತಕಿ ರಶೀದ್ ಮಲಬಾರಿ ಮತ್ತು ಮಾಡೂರು ಇಸುಬು ಹಲ್ಲೆ ನಡೆಸಿದ್ದಾರೆ.
ಶುಕ್ರವಾರ ಬೆಳಗ್ಗೆ ಮಲಬಾರಿ, ಇಸುಬು ಮತ್ತು ಹೈದರ್ ಮೂರು ಮಂದಿ ಸೇರಿಕೊಂಡು ಮುನೀರ್ಗೆ ಗಂಭೀರ ಹಲ್ಲೆ ನಡೆಸಿದರು. ಗಾಯಗೊಂಡಿರುವ ಮುನೀರ್ನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳವು ಆರೋಪದ ಮೇಲೆ ಮುನೀರ್ನನ್ನು ಮಾ.26ರಂದು ಕದ್ರಿ ಪೊಲೀಸರು ಜೈಲಿಗೆ ತಳ್ಳಿದ್ದರು. ಈತ ಪೊಲೀಸರಿಗೆ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದ.
ಈತ ಜೈಲಿಗೆ ಸೇರಿದ ಬಳಿಕ ಕ್ರೈಂ ಬ್ರಾಂಚ್ ಪೊಲೀಸರು ಪದೇ ಪದೇ ಜೈಲಿಗೆ ಬರುತ್ತಿರುವುದನ್ನು ಕಂಡು ಸಂಶಯಗೊಂಡ ರಶೀದ್ ಮಲಬಾರಿ ಗ್ಯಾಂಗ್ ಹಲ್ಲೆ ನಡೆಸಿದೆ ಎನ್ನಲಾಗಿದೆ. ದಾವೂದ್ ಗ್ಯಾಂಗ್ನ ರಶೀದ್ ಮಲಬಾರಿಯನ್ನು ಎಲ್.ಕೆ. ಆಡ್ವಾಣಿ ಕೊಲೆ ಸಂಚು ಆರೋಪದಲ್ಲಿ 2009ರಲ್ಲಿ ಜಿಲ್ಲಾ ಅಪರಾಧ ಗುಪ್ತವಾರ್ತೆ ದಳ ಪೊಲೀಸರು ಬಂಧಿಸಿದ್ದರು.