16ರಂದು ನೃತ್ಯಯಜ್ಞ ನೃತ್ಯಭಾರತಿ ರಜತೋತ್ಸವ ಸಮಾರೋಪ
ಕ.ಪ್ರ. ವಾರ್ತೆ ಮಂಗಳೂರು ಏ.13
ರಜತೋತ್ಸವ ಸಂಭ್ರಮದಲ್ಲಿರುವ ಕದ್ರಿ ನೃತ್ಯಭಾರತಿ ವರ್ಷಪೂರ್ತಿ ಸರಣಿ ಕಾರ್ಯಕ್ರಮ ಸಮಾರೋಪ ಅಂಗವಾಗಿ 16ರಂದು ಪುರಭವನದಲ್ಲಿ 90 ಕಲಾವಿದರಿಂದ 'ನೃತ್ಯಯಜ್ಞ' ಕಾರ್ಯಕ್ರಮ ನಡೆಯಲಿದೆ. ಸಂಜೆ 4.30ರಿಂದ 9 ಗಂಟೆಯವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಲಾವಣ್ಯ ಅನಂತ್ ಭರತನಾಟ್ಯ ಪ್ರದರ್ಶಿಸುವರು ಎಂದು ಗೀತಾ ಸರಳಾಯ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ನೃತ್ಯಭಾರತಿ ಗುರುದ್ವಯರಾದ ರಶ್ಮಿ ಚಿದಾನಂದ್ ಹಾಗೂ ಗೀತಾ ಸರಳಾಯ ನಿರ್ದೇಶನದಲ್ಲಿ ಸಂಜೆ 4.30ರಿಂದ ಸಂಜೆ 6.30ರವರೆಗೆ ನೃತ್ಯಭಾರತಿ ವಿದ್ಯಾರ್ಥಿಗಳಿಂದ ನೃತ್ಯಯಜ್ಞ ನಡೆಯಲಿದೆ.