ಉತ್ತರ ಕ್ಷೇತ್ರ ಜೆಡಿಎಸ್ನಲ್ಲಿ ಒಗ್ಗಟ್ಟು
ಮಂಗಳೂರು: ಜೆಡಿಎಸ್ ಉತ್ತರ ಕ್ಷೇತ್ರದಲ್ಲಿ ಪದಾಧಿಕಾರಿಗಳು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಕ್ಷೇತ್ರಾಧ್ಯಕ್ಷ ಸುದರ್ಶನ್ ಶೆಟ್ಟಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಉತ್ತರ ಕ್ಷೇತ್ರ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಹಕೀಂ ವಾಮಂಜೂರು ರಾಜೀನಾಮೆ ನೀಡುವುದಾಗಿ ಕೆಲವು ಮಂದಿ ಘೋಷಣೆ ಮಾಡಿದ್ದರು. ನಮ್ಮಲ್ಲಿ ಪಕ್ಷದ ಯಾವುದೇ ಕಾರ್ಯಕರ್ತರು ರಾಜೀನಾಮೆ ನೀಡುವುದಿಲ್ಲ, ಪಕ್ಷ ತೊರೆಯುವುದಿಲ್ಲ ಎಂದಿದ್ದಾರೆ. ಜಿಲ್ಲೆಯಲ್ಲಿ ಕೆಲ ದಿನಗಳಿಂದ ಪಕ್ಷದಲ್ಲಿ ನಡೆದ ಘಟನೆಗಳಿಂದ ನಾವು ದೂರವೇ ಇದ್ದೇವೆ. ಉತ್ತರ ಕ್ಷೇತ್ರದಿಂದ ಯೋಗ್ಯ ಅಭ್ಯರ್ಥಿ ಆಯ್ಕೆ ಮಾಡುವಂತೆ ಕಾರ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಹಕೀಂ ವಾಮಂಜೂರು, ತ್ಯಾಂಪಣ್ಣ ಶೆಟ್ಟಿ, ರಾಜೇಶ್ ಶೆಟ್ಟಿ, ರಫೀಕ್ ಕಾಟಿಪಳ್ಳ ಇದ್ದರು.