ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಾಮಗಾರಿ ಉದ್ಘಾಟನೆ ವಿವಾದ: ಮಾತಿನ ಚಕಮಕಿ

Vishwanath S
Updated On : 14 Apr 2013, 12:13 pm

ಕೋಟ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಮಾಜಿ ಶಾಸಕ, ಪಕ್ಷೇತರ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಬೆಂಬಲಿಗರು ಮತ್ತು ಕೋಟ ಗ್ರಾಪಂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಶನಿವಾರ ನಡೆದಿದೆ.
ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದ ಕೋಟ ಫಿಶರೀಸ್ ರಸ್ತೆ ಕಾಂಕ್ರಿಟ್‌ಕರಣ ಕಾಮಗಾರಿಗೆ ಬಂದರು, ಮೀನುಗಾರಿಕೆ ಇಲಾಖೆಯಿಂದ ರು. 30 ಲಕ್ಷ ಅನುದಾನ ಬಿಡುಗಡೆಗೊಂಡಿದ್ದು, ರಸ್ತೆ ಕಾಮಗಾರಿ ಇತ್ತೀಚೆಗೆ ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ  ಶಾಸಕರಾಗಿದ್ದರು.
ಮಾತಿನ ಚಕಮಕಿ: ಈ ರಸ್ತೆ ಉದ್ಘಾಟನೆಗೆ ಚುನಾವಣಾ ನೀತಿ ಸಂಹಿತೆಯ ತೊಡಕಿನಿಂದಾಗಿ, ತೆಂಗಿನಕಾಯಿ ಒಡೆಯುವುದರ ಮೂಲಕ ಸಣ್ಣ ಪ್ರಮಾಣದಲ್ಲಿ ಉದ್ಘಾಟನೆ ಮಾಡಲು ತೀರ್ಮಾನಿಸಿ ಕೋಟ ಗ್ರಾಪಂ ಸದಸ್ಯರು ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಸ್ಥಳಕ್ಕೆ ಆಗಮಿಸಿದರು. ಇದನ್ನು ತಿಳಿದ ಹಾಲಾಡಿ ಬೆಂಬಲಿಗರು, ಬಂದು ನೀತಿ ಸಂಹಿತೆ ಇರುವುದನ್ನು ಹೇಳಿ, ಯಾವುದೇ ರೀತಿಯ ಉದ್ಘಾಟನೆಯನ್ನು ವಿರೋಧಿಸಿದರು. ಇದರಿಂದ ಕೆಲ ಹೊತ್ತು 2 ತಂಡಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಈ ಬಗ್ಗೆ ಯಾರೋ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಉದ್ಘಾಟನಾ ಕಾರ್ಯಕ್ರಮ ಕೈಬಿಡಲಾಯಿತು.
ತಾಪಂ ಸದಸ್ಯ ರಾಘವೇಂದ್ರ ಕಾಂಚನ್, ಭರತ್ ಕುಮಾರ್ ಶೆಟ್ಟಿ, ಕೋಟ ಗ್ರಾಪಂ ಸದಸ್ಯ ಚಂದ್ರಶೇಖರ ಆಚಾರ್, ಸದಾನಂದ ಜಿ., ಸತೀಶ್ ಬಾರಿಕೆರೆ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement