ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನರ್ಲಡ್ಕ ಕಾಲೋನಿಯಲ್ಲಿ ಪ್ರತಿಭಟನೆ

Vishwanath S
Updated On : 14 Apr 2013, 12:18 pm

ಸುಳ್ಯ: ಎಣ್ಮೂರು ಗ್ರಾಮದ ನರ್ಲಡ್ಕ ಕಾಲೋನಿಯ ನಿವಾಸಿಗಳು ಕುಡಿಯುವ ನೀರಿಗಾಗಿ ಪ್ರತಿಭಟನೆ ನಡೆಸಿದರು.
ಕಾಲೋನಿಯಲ್ಲಿ ಸುಮಾರು 80 ಮನೆಗಳಿದ್ದು ಕುಡಿಯುವ ನೀರಿನ ವ್ಯವಸ್ತೆ ಸರಿಯಾಗಿಲ್ಲ. ಕುಡಿಯುವ ನೀರಿಲ್ಲದೆ ದೂರದಿಂದ ನೀರು ತರುವಂತಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಕೂಡಲೇ ಸ್ಪಂದಿಸಿ ಮೂಲಭೂತ ಸೌಕರ್ಯ ಒದಗಿಸಬೇಕು. ಇಲ್ಲದಿದ್ದರೆ ಮತದಾನ ಬಹಿಷ್ಕಾರ ಮಾಡುವುದಾಗಿ ಅವರು ಹೇಳಿದರು.
ಪ್ರತಿಭಟನೆಯಲ್ಲಿ ಚಂದ್ರಶೇಖರ, ಹನೀಫ್, ಸುಂದರ ಮೂಲ್ಯ, ಚಂದ್ರಶೇಖರ ಶಶಿಧರ, ಇಸ್ಮಾಯಿಲ್, ರಫೀಕ್, ಸಂಜೀವ ಪೂಜಾರಿ, ಚಂದ್ರ, ನೇತ್ರ, ಪದ್ಮಾವತಿ, ಪ್ರೇಮಾ, ಜುಲೇದಾ, ಖದೀಜಮ್ಮ, ಸುಮಯ್ಯ, ಕುಸುಮಾಧರ, ಸಾಜನ್ ಹಾಗೂ ಸುಮಾರು ನೂರಕ್ಕೂ ಅಧಿಕ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement