ಪೆರ್ನೆ ಟ್ಯಾಂಕರ್ ದುರಂತ ಮೃತರ ಸಂಖ್ಯೆ 10ಕ್ಕೇರಿಕೆ
ಉಪ್ಪಿನಂಗಡಿ: ಪೆರ್ನೆ ಬಳಿ ಸಂಭವಿಸಿದ್ದ ಅಡುಗೆ ಅನಿಲ ಸಾಗಾಟದ ಟ್ಯಾಂಕರ್ ಅಪಘಾತದಲ್ಲಿ ಗಾಯಗೊಂಡಿದ್ದ ಇಂದಿರಾ ರೈ (47) ಶನಿವಾರ ಬೆಳಗ್ಗೆ ಮೃತಪಟ್ಟಿದ್ದು, ಸತ್ತವರ ಸಂಖ್ಯೆ 10ಕ್ಕೇರಿದೆ.ಏ.9ರಂದು ಮಂಗಳೂರಿನಿಂದ ಬೆಂಗಳೂರಿನತ್ತ ಅಡುಗೆ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಚಾಲಕ ಸೆಲ್ವರಸು ನಿರ್ಲಕ್ಷ್ಯದಿಂದ ಪೆರ್ನೆಯ ತಿರುವಿನಲ್ಲಿ ಉರುಳಿ ಬಿದ್ದಿತ್ತು. ಅಪಘಾತದ ತೀವ್ರತೆಗೆ ಅನಿಲ ಸೋರಿಕೆಯಿಂದ ಅಗ್ನಿ ಸ್ಪರ್ಶವಾಗಿ ಘಟನೆಯ ದಿನವೇ 8 ಮಂದಿ ಸಜೀವ ದಹನವಾಗಿದ್ದರು. ಗಾಯಾಳು ವಿಮಲ ಶುಕ್ರವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರೆ, ಶನಿವಾರ ಇಂದಿರಾ ರೈ ಮೃತಪಟ್ಟಿದ್ದಾರೆ.