ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬೇಕರಿಗೆ ರು. 300 ಪಾವತಿಸದೆ ಠಾಣೆ ಮೆಟ್ಟಿಲೇರಿದ 'ಅಧಿಕಾರಿ'!

Vishwanath S
Updated On : 14 Apr 2013, 12:14 pm

ಸುಳ್ಯ: ಬೇಕರಿಯೊಂದರಿಂದ ಸಿಹಿ ತಿಂಡಿ ಖರೀದಿಸಿ ಹಣ ಕೊಡದೆ ಹೋದ ಅಧಿಕಾರಿಯೊಬ್ಬರು ಬೇಕರಿ ಮಾಲೀಕರ ದೂರಿನ ಮೇರೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಶನಿವಾರ ಸುಳ್ಯದಲ್ಲಿ ನಡೆದಿದೆ. ಗಾಂಧಿನಗರದ ರಂಜಿತ್ ಬೇಕರಿಗೆ ಬಂದ ಮೂವರು ಮಹಿಳೆಯರ ತಂಡವೊಂದು ಸಿಹಿ ತಿಂಡಿಗಳನ್ನು ಖರೀದಿಸಿತು. ಅಂಗಡಿಯವರು ರು. 300 ಬಿಲ್ ನೀಡಿದಾಗ ತಾನು ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಕಮಿಷನರ್ ಎಂದು ಹೇಳಿದ ಮಹಿಳೆ ಸೀದಾ ಕಾರು ಹತ್ತಿ ಹೋಗೇಬಿಟ್ಟರು. ಬೇಕರಿ ಮಾಲೀಕರು ಸುಳ್ಯ ಪೊಲೀಸರಿಗೆ ದೂರು ನೀಡಿದರು. ಸುಳ್ಯ ಪೊಲೀಸರು ಕಲ್ಲುಗುಂಡಿ ಠಾಣೆಗೆ ಮಾಹಿತಿ ನೀಡಿದರು. ಕೂಡಲೇ ಅವರು ಕಲ್ಲುಗುಂಡಿಯಲ್ಲಿ ಮಹಿಳೆಯರಿದ್ದ ವಾಹನವನ್ನು ತಡೆದು ಸುಳ್ಯ ಠಾಣೆಗೆ ಕರೆತಂದರು. ಅಲ್ಲಿ ಮಹಿಳೆ ತಮ್ಮ ಗುರುತು ಪತ್ರ ನೀಡಿ ತಾನು ಬೆಂಗಳೂರಿನಲ್ಲಿ ಎಸಿ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ವೇಳೆ ಸುಳ್ಯದಲ್ಲಿ ಜಿಲ್ಲಾಧಿಕಾರಿ ಕರೆದ ಸಭೆಯಲ್ಲಿ ಪಾಲ್ಗೊಂಡಿದ್ದ ಎಸ್‌ಐಗೆ ಮಾಹಿತಿ ನೀಡಿದಾಗ ಅವರು ಅಂಗಡಿ ಮಾಲೀಕರಿಗೆ ಲಿಖಿತ ದೂರು ನೀಡುವಂತೆ ತಿಳಿಸಲು ಹೇಳಿದ್ದು, ಅಂಗಡಿ ಮಾಲೀಕರು ನಿರಾಕರಿಸಿದ್ದಾರೆ. ಈ ನಡುವೆ ಮಹಿಳೆ, ತಾನು ಖರೀದಿಸಿದ ಸಿಹಿತಿಂಡಿಯ ಮೊತ್ತ ನೀಡಲು ಹೋದಾಗ ಮಾಲೀಕರು ತೆಗೆದುಕೊಳ್ಳಲು ನಿರಾಕರಿಸಿ ಅದನ್ನು ಕಲ್ಕುಡ ದೈವದ ಹುಂಡಿಗೆ ಹಾಕಲು ಹೇಳಿದರೆನ್ನಲಾಗಿದೆ. ಇತ್ತ ಈ ಅಧಿಕಾರಿ ಅಸಲಿಯೋ, ನಕಲಿಯೋ ಎಂದು ತಿಳಿಯದ ಪೊಲೀಸರು ಅವರನ್ನು ಠಾಣೆಯಿಂದ ಕಳುಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement