ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಕ್ಫ್ ಮಂಡಳಿ ಅವ್ಯವಹಾರ; ಪ್ರಕರಣ ದಾಖಲು ನಿರ್ಧಾರ

Vishwanath S
Updated On : 14 Apr 2013, 12:13 pm

ಮಂಗಳೂರು: ವಕ್ಫ್ ಮಂಡಳಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಮೀಸಲಿಟ್ಟ ಹಣದಲ್ಲಿ ಸುಮಾರು ರು. 2ಲಕ್ಷ ಕೋಟಿ ಅವ್ಯವಹಾರ ನಡೆದಿದ್ದು, ಕೇಂದ್ರದ ಇಬ್ಬರು ಸಚಿವರೂ ಸೇರಿದಂತೆ 18 ಮಂದಿ ವಿರುದ್ಧ ಈ ಕುರಿತು ಲೋಕಾಯುಕ್ತ ಕೋರ್ಟಿನಲ್ಲಿ ಕೇಸು ದಾಖಲಿಸಲಾಗುವುದು ಎಂದು ಮಾಹಿತಿ ಹಕ್ಕು ಹೋರಾಟಗಾರ ಅಬ್ರಹಾಂ ಟಿ.ಜೆ ಹೇಳಿದ್ದಾರೆ.
ಶನಿವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಕೇಂದ್ರದ ಇಬ್ಬರು ಸಚಿವರು, ಸಂಸದ, ರಾಜ್ಯದ ನಾಲ್ವರು ಶಾಸಕರು ಸೇರಿದಂತೆ 12 ಮಂದಿ ಇತರ ಅಧಿಕಾರಿಗಳು ವಕ್ಫ್ ಹಣ ಕಬಳಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸಚಿವರೊಬ್ಬರು, ಇವರ ಮಗ, ಮಗಳು, ಹೆಂಡತಿ, ಅಳಿಯ ಹಾಗೂ ಸಂಬಂಧಿಕರು ಸೇರಿದಂತೆ ಒಟ್ಟು ರು. 300 ಕೋಟಿ ಮೊತ್ತ ಕಬಳಿಸಿದ್ದಾರೆ ಎಂದು ದಾಖಲೆ ಸಮೇತ ಅಬ್ರಹಾಂ ಆರೋಪಿಸಿದರು.
ಕೋಟ್ಯಾಂತರ ಅವ್ಯವಹಾರದ ಕುರಿತು ಅಲ್ಪಸಂಖ್ಯಾತ ಆಯೋಗಕ್ಕೆ ಮಾಹಿತಿ ಇದ್ದರೂ, ಲೋಕಾಯುಕ್ತ ಕೋರ್ಟಿಗೆ ಆಯೋಗದವರು ತಿಳಿಸಬಹುದಿತ್ತಲ್ಲವೇ ಎಂದು ಅವರು ಪ್ರಶ್ನಿಸಿದರು. ಅವ್ಯವಹಾರದಲ್ಲಿ ಆಯೋಗವು ಶಾಮೀಲಾಗಿರುವ ಸಂಶಯ ವ್ಯಕ್ತವಾಗುತ್ತದೆ ಎಂದ ಅವರು, ಸಚಿವರ ವಿರುದ್ಧ ಲೋಕಾಯುಕ್ತ ಕೋರ್ಟಿನಲ್ಲಿ ಕೇಸು ದಾಖಲಿಸಲು ಪ್ರಧಾನ ಮಂತ್ರಿ ಅವರಲ್ಲಿ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿದೆ. 3 ತಿಂಗಳೊಳಗೆ ಅನುಮತಿ ದೊರಕದಿದ್ದರೆ ಸುಪ್ರೀಂ ಕೋರ್ಟಿನಲ್ಲಿ ಈ ಕುರಿತು ದಾವೆ ಹೂಡಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement