ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆ ಒತ್ತೆ ಇಡುವಂತಿಲ್ಲ

Vishwanath S
Updated On : 14 Apr 2013, 12:12 pm

ಮಂಗಳೂರು:  ಶುಲ್ಕ ವಸೂಲಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆ ಪತ್ರಗಳನ್ನು ಶಿಕ್ಷಣ ಸಂಸ್ಥೆಗಳು ಒತ್ತೆ ಇಡಲು ಸಾಧ್ಯ ಇಲ್ಲ ಎಂದು ಜಿಲ್ಲಾ ಗ್ರಾಹಕ ಕೋರ್ಟ್ ತೀರ್ಪು ನೀಡಿದೆ.
ಶೈಕ್ಷಣಿಕ ದಾಖಲೆ ನೀಡಬೇಕು ಮತ್ತು ವಿದ್ಯಾರ್ಥಿನಿಯರಿಗೆ ನೀಡಿದ ಮಾನಸಿಕ ಹಿಂಸೆಗಾಗಿ ತಿಂಗಳ ಒಳಗೆ ವಿದ್ಯಾರ್ಥಿನಿಯರಿಗೆ ತಲಾ 25 ಸಾವಿರ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕ ಕೋರ್ಟ್ ಅಧ್ಯಕ್ಷೆ ಆಶಾ ಶೆಟ್ಟಿ ತೀರ್ಪು ನೀಡಿದ್ದಾರೆ. ಇಂದಿರಾ ಎಜುಕೇಶನ್ ಟ್ರಸ್ಟ್ ಫಳ್ನೀರ್‌ನಲ್ಲಿ ಇಂದಿರಾ ಹಾಸ್ಪಿಟಲ್ ಮತ್ತು ನರ್ಸಿಂಗ್ ಸ್ಕೂಲ್ ನಡೆಸುತ್ತಿದೆ. ಈ ನರ್ಸಿಂಗ್ ಸ್ಕೂಲ್‌ಗೆ 2009ರಲ್ಲಿ 6 ವಿದ್ಯಾರ್ಥಿನಿಯರು ಸೇರಿದರು. ವಿದ್ಯಾರ್ಥಿನಿಯರು ಬಡತನದಿಂದಾಗಿ ಕೋರ್ಸ್ ಮುಂದುವರಿಸದೆ ಮಧ್ಯದಲ್ಲಿಯೇ ಶಿಕ್ಷಣ ಕೈ ಬಿಟ್ಟರು.  ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿ ಮತ್ತು ವರ್ಗಾವಣೆ ಪ್ರಮಾಣಪತ್ರ ಕೇಳಲು ಹೋದಾಗ ಸಂಸ್ಥೆಯವರು ನೀಡಲು ಒಪ್ಪಲಿಲ್ಲ. ಹಣ ಪೂರ್ತಿ ಪಾವತಿಸಿದ ಬಳಿಕವೇ ದಾಖಲೆ ನೀಡುತ್ತೇವೆ ಎಂದರು. ಇದರ ವಿರುದ್ಧ ವಿದ್ಯಾರ್ಥಿನಿಯರು ಜಿಲ್ಲಾ ಗ್ರಾಹಕ ಕೋರ್ಟ್‌ಗೆ ದೂರು ನೀಡಿದರು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement