30ರೊಳಗೆ ಭವಿಷ್ಯ ನಿಧಿ ಮಾಹಿತಿ ನೀಡಿ
ಮಂಗಳೂರು: ಕಾರ್ಮಿಕ ಪಿಂಚಣಿ ಯೋಜನೆ 1995ರ ಮೌಲ್ಯ ನಿರ್ಣಯಕ್ಕಾಗಿ ಕಾರ್ಮಿಕರ ಭವಿಷ್ಯನಿಧಿ ಕಾಯ್ದೆಯಡಿ ನೋಂದಾಯಿಸಲ್ಪಟ್ಟ ಸದಸ್ಯರು ಏ. 30ರೊಳಗೆ ಪೂರ್ಣ ಮಾಹಿತಿಯನ್ನು ಸಲ್ಲಿಸಬೇಕಾಗಿದೆ.ಇದಕ್ಕಾಗಿ ಕಾರ್ಮಿಕರ ಭವಿಷ್ಯನಿಧಿ ಸಂಸ್ಥೆಯ ವೆಬ್‌ಸೈಟ್ ಢಿಢಿಢಿ.ಜಠಜ್ಝಿಟಿಜ್ಝಛ.್ಜ್ಟಢ.್ಝಟಿ ನ Employer’s ಕ್ಟ್ಠಿಡಿಛಟ ನಲ್ಲಿ ಉದ್ಯೋಗದಾತರಿಗೆ ವಿಶೇಷ ಸೌಲಭ್ಯ ಒದಗಿಸಲಾಗಿದೆ. ಎಲ್ಲಾ ಸಂಸ್ಥೆಯ ಉದ್ಯೋಗದಾರರು ಮಾಹಿತಿ ನೀಡುವಂತೆ ಪ್ರಾದೇಶಿಕ ಭವಿಷ್ಯನಿಧಿ ಅಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪುರ: ಇಂದಿನಿಂದ ವಿಶಿಷ್ಟ ಬೇಸಗೆ ಶಿಬಿರ
ಕುಂದಾಪುರ: ಹಟ್ಟಿಯಂಗಡಿ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಸಾಧನಾ ಕಿಶೋರ ವಿಕಾಸ ಶಿಬಿರ ಏ.15ರಿಂದ 23ರತನಕ ನಡೆಯಲಿದೆ.
ಬಾಲಕಗೆ ಸಹಾಯ ಮಾಡಿ
ಮಂಗಳೂರು: ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ದಾವಣಗೆರೆಯ ನಿವಾಸಿ ಕೀರ್ತಿ. ಎಚ್.ಎಸ್(10) ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗೆ ಧನಸಹಾಯಕ್ಕಾಗಿ ನೆರವು ಆಶಿಸುತ್ತಿದ್ದಾನೆ. ಕೀರ್ತಿಗೆ ಸುಮಾರು 3ವರ್ಷಗಳ ದೀರ್ಘಕಾಲದ ಚಿಕಿತ್ಸೆ ಅಗತ್ಯವಿದ್ದು, ಸುಮಾರು ರು. 8 ಲಕ್ಷ ಬೇಕಾಗಿದೆ. ತಂದೆ ಸಿದ್ಧರಾಮಪ್ಪ, ತಾಯಿ ಗೌರಮ್ಮ ಕೂಲಿ ಕೆಲಸ ನಿರ್ವಹಿಸುತ್ತಿದ್ದು, ಬಡವರಾಗಿದ್ದಾರೆ. ಬಾಲಕ ಕೀರ್ತಿ ಶ್ರೀ ರಾಜರಾಜೇಶ್ವರಿ ವಿದ್ಯಾಪೀಠದಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಓದಿನಲ್ಲಿ ಮುಂದಿದ್ದಾನೆ. ತಲೆನೋವು ಎಂದು ವೈದ್ಯರ ಬಳಿ ಚಿಕಿತ್ಸೆಗೆ ತೆರಳಿದ್ದಾಗ ವೈದ್ಯರು ಕಾಯಿಲೆ ಕುರಿತು ತಿಳಿಸಿದ್ದಾರೆ. ನೆರವಿಗಾಗಿ ಚೆನ್ನಗಿರಿ ನೃಪತುಂಗ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಕೀರ್ತಿ ಎಚ್‌ಎಸ್ ಆ/ಈ ಃ್ಟ- 0572101058819 ಹಣವನ್ನು ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ಸಿದ್ಧರಾಮಪ್ಪ-9901116997 ಸಂಪರ್ಕಿಸಬಹುದು.
ಮದ್ಯಪಾನ: ವ್ಯಕ್ತಿ ಸಾವು
ಮಣಿಪಾಲ: ಇಲ್ಲಿನ ಹಿರೇಬೆಟ್ಟು ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿ ವ್ಯಕ್ತಿಯೊಬ್ಬ ಮದ್ಯಪಾನ ಮಾಡಿ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ. ಮೃತರು ಹುಸೇನ್ ಪೂಮರ್ (40), ಈತನಿಗೆ ವಿಪರೀತ ಮದ್ಯಪಾನದ ಚಟ ಇತ್ತು. ಇದೇ ಕಾರಣಕ್ಕೆ ಶನಿವಾರ ರಾತ್ರಿ ಮನೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಪತ್ನಿ ಸಾವಿತ್ರಿ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರದಿಂದ ಬಿದ್ದು ಗಾಯ: ವ್ಯಕ್ತಿ ಸಾವು
ಬಂಟ್ವಾಳ: ತೆಂಗಿನ ಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ನಾವೂರು ನಿವಾಸಿ ವಿಲ್ಸಿ ವಿಲ್ಸನ್ ನಝರತ್ (30) ಮೃತರು. ಏ. 11 ರಂದು ಇವರು ನಾವೂರು ಗ್ರಾಮದ ಹಳೆಗೇಟು ಎಂಬಲ್ಲಿನ ತೆಂಗಿನ ಮರದದಿಂದ ಕಾಯಿ ಕೀಳುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದಿದ್ದರು. ಚಿಕಿತ್ಸೆಗೆಂದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಭಾನುವಾರ ಮುಂಜಾನೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರ ಸಹೋದರ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.