ಉಪ್ಪಿಟ್ಟು ತಿಂದು 13 ಜನ ಅಸ್ವಸ್ಥ
ಇಂಡಿ: ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಉಪಾಹಾರಕ್ಕೆಂದು ತಯಾರಿಸಿದ್ದ ಉಪ್ಪಿಟ್ಟು ತಿಂದು ಒಂದೇ ಕುಂಟುಬದ 13 ಜನರು ಅಸ್ವಸ್ಥರಾಗಿದ್ದಾರೆ. ಉಪ್ಪಿಟ್ಟು ತಿಂದ ತಕ್ಷಣವೇ ಎಲ್ಲರಿಗೂ ತಲೆ ಸುತ್ತಿ ಬಂದು, ವಾಂತಿ ಮಾಡಿಕೊಳ್ಳಲಾರಂಭಿಸಿದರು. ತಕ್ಷಣ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ತಾಲೂಕು ಆಸ್ಪತ್ರೆಗೆ ಸಾಗಿಸಲಾಯಿತು. ಇಂಗಳಗಿ ಗ್ರಾಮದ ಮಾನಂದ ಸೊಲಂಕರ, ಲಕ್ಷ್ಮೀ, ಭೀಮರಾಯ, ಶಿವಾಜಿ, ಭಾಗ್ಯಶ್ರೀ, ಕಲ್ಪನಾ, ಕಿರಣ, ಭೀಮಕ್ಕ, ವಿನೋದ, ಭವಾನಿ, ಅಂಬಾಜಿ, ಸುಗಲಾಬಾಯಿ, ಸುಖದೇವ್ ಅಸ್ವಸ್ಥರು.ಅಸ್ವಸ್ಥರಾದ 13 ಜನರಲ್ಲಿ ಐವರು ಮಕ್ಕಳು, ನಾಲ್ವರು ಮಹಿಳೆಯರಿದ್ದಾರೆ.