'ಕಲಾ ಕೇದಿಗೆ' ಚಿತ್ರಕಲಾ ಪ್ರದರ್ಶನ
ಮಂಗಳೂರು: ಕಾಡಿನ ಮಧ್ಯೆ ಸಾಗುತ್ತಿರುವ ಎತ್ತಿನ ಗಾಡಿ, ಸೂರ್ಯ ಕಣ್ಮರೆಯಾಗುತ್ತಿರುವ ಸಮಯದಲ್ಲಿ ಸಮುದ್ರದಲ್ಲಿ ದೋಣಿಯಲ್ಲಿ ವಿಹರಿಸುತ್ತಿರುವ ಅಂಬಿಗ, ಕೋಣೆಯಲ್ಲಿ ರಾಶಿ ಹಾಕಿರುವ ಪೈಂಟ್‌ನ ಹಳೆ ಡಬ್ಬ, ಬಾಟಲಿಗಳು, ತಿಳಿ ನೀರು ಕುಡಿಯುತ್ತಿರುವ ಆನೆಗಳ ಹಿಂಡು.. ಇದು ಕಲಾವಿದ ಕುಂಚದಲ್ಲಿ ಮೂಡಿ ಬಂದ ಕಲಾಕೃತಿಗಳು.
ಕೇದಿಗೆ ಪ್ರತಿಷ್ಠಾನ ವತಿಯಿಂದ ಇತ್ತೀಚೆಗೆ ಮಲ್ಲಿಕಟ್ಟೆ ಲಯನ್ಸ್ ಕ್ಲಬ್‌ನಲ್ಲಿ ನಡೆದ 'ಕಲಾ ಕೇದಿಗೆ' ಚಿತ್ರಕಲಾ ಪ್ರದರ್ಶದಲ್ಲಿ ಕಂಡು ಬಂದ ದೃಶ್ಯಗಳು.
ಕೇದಿಗೆ ಭಾಸ್ಕರ್ ರಾವ್ ಅವರ ಪತ್ನಿ ಕೆ. ಲಕ್ಷ್ಮಿ ಭಾಸ್ಕರ್ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಕಲಾವಿದ ಬಿ. ಗಣೇಶ್ ಸೋಮಯಾಜಿ ಮಾತನಾಡಿದರು. ಕೇದಿಗೆ ಕುಟುಂಬಸ್ಥರಾದ ಅನನ್ಯ ರಾವ್, ಅಂಜಲಿ ರಾವ್, ವರುಣ್, ಹೇಮಾ ಸುರೇಶ್ ಹೆಬ್ಬಾರ್, ರಾಜೇಂದ್ರ, ವಸಂತ, ಗಾಯತ್ರಿ ಶರ್ಮಾ, ರಾಜೇಶ್ ರಾವ್ ಅವರು ರಚಿಸಿದ ಸುಮಾರು 30ಕ್ಕಿಂತಲೂ ಅಧಿಕ ಕಲಾಕೃತಿಗಳು ಪ್ರದರ್ಶನದಲ್ಲಿವೆ.
ಎಸ್‌ಟಿಎಸ್ ಕೋರ್ ಡೆಕೋರ್ ನಿರ್ದೇಶಕ ಶಶಾಂಕ್ ಶೆಟ್ಟಿ, ಅರವಿಂದ್ ಕೇದಿಗೆ ಇದ್ದರು.