ಜ್ಞಾನ ವೃದ್ಧಿಗೆ ಶಿಕ್ಷಣ ಮುಖ್ಯ: ತಮಿಳ್ವಾಣನ್
ಮಂಗಳೂರು: ಜ್ಞಾನ ವೃದ್ಧಿಗಾಗಿ ವಿದ್ಯಾಭ್ಯಾಸದಲ್ಲಿ ತೊಡಗಬೇಕೇ ಹೊರತು ಕೇವಲ ಹಣ ಸಂಪಾದನೆ ಗುರಿಯಾಗಬಾರದು ಎಂದು ಎನ್ಎಂಪಿಟಿ ಅಧ್ಯಕ್ಷ ತಮಿಳ್ವಾಣನ್ ಹೇಳಿದ್ದಾರೆ.
ರೋಶನಿ ನಿಲಯದಲ್ಲಿ ಇತ್ತೀಚೆಗೆ ನಡೆದ 'ಮಾನವ ಸಂಪನ್ಮೂಲ ಸಮ್ಮೇಳನ-2013' ಉದ್ಘಾಟಿಸಿ ಮಾತನಾಡಿದರು.
10ನೇ ತರಗತಿ ಪಾಸಾದ ವಿದ್ಯಾರ್ಥಿಗಳು ಯಾವುದೇ ತರಬೇತಿ ಇಲ್ಲದೆ ನೇರವಾಗಿ ಡಿಪ್ಲೋಮ ಕಲಿಯುತ್ತಾರೆ. ಇದರಿಂದ ಮಾನವ ಶಕ್ತಿ ನಾಶವಾಗುವ ಸಾಧ್ಯತೆಯಿದೆ ಎಂದರು.
ರೋಶನಿ ಸಂಪನ್ಮೂಲ ಸಂಸ್ಥೆಯ ನಿರ್ದೇಶಕಿ ಡಾ. ಜೆನಿಸ್ ಮೇರಿ ಬರೆದ 'ಸಾಮಾಜಿಕ ಕಾರ್ಯನಿರ್ವಹಣೆ' ಕುರಿತ ಪುಸ್ತಕ ಬಿಡುಗಡೆಗೊಂಡಿತು.
ಸಂತ ಅಲೋಶಿಯಸ್ ಕಾಲೇಜಿ ಅಧ್ಯಕ್ಷ ಫಾ. ಒಸ್ವಲ್ಡ್ ಮಸ್ಕರೇನ್ಹಸ್, ರೋಶನಿ ಕಾಲೇಜಿನ ಪ್ರಾಂಶುಪಾಲೆ ಡಾ. ಸೊಫಿಯಾ ಎನ್ ಫೆರ್ನಾಂಡಿಸ್, ಎನ್ಐಟಿಎಂನ ಅಧ್ಯಕ್ಷ ಅನಿಲ್ ಮತ್ತಿತ್ತರರು ಇದ್ದರು.