ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನಾಳೆ 90 ಕಲಾವಿದರ ನೃತ್ಯಯಜ್ಞ

Lingaraj Badiger
Updated On : 15 Apr 2013, 12:31 pm

ಮಂಗಳೂರು: ರಜತೋತ್ಸವ ಸಂಭ್ರಮದಲ್ಲಿರುವ ಕದ್ರಿ ನೃತ್ಯಭಾರತಿ ವರ್ಷಪೂರ್ತಿ ಸರಣಿ ಕಾರ್ಯಕ್ರಮ ಸಮಾರೋಪ ಅಂಗವಾಗಿ 16ರಂದು ಪುರಭವನದಲ್ಲಿ 90 ಕಲಾವಿದರಿಂದ 'ನೃತ್ಯಯಜ್ಞ' ಕಾರ್ಯಕ್ರಮ ನಡೆಯಲಿದೆ.
ಸಂಜೆ 4.30ರಿಂದ 9 ಗಂಟೆ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಲಾವಣ್ಯ ಅನಂತ್ ಭರತನಾಟ್ಯ ಪ್ರದರ್ಶಿಸುವರು ಎಂದು ಗೀತಾ ಸರಳಾಯ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.  
ನೃತ್ಯಭಾರತಿ ಗುರುದ್ವಯರಾದ ರಶ್ಮಿಚಿದಾನಂದ್ ಹಾಗೂ ಗೀತಾ ಸರಳಾಯ ನಿರ್ದೇಶನದಲ್ಲಿ ಸಂಜೆ 4.30ರಿಂದ ಸಂಜೆ 6.30ರವರೆಗೆ ನೃತ್ಯಭಾರತಿ ವಿದ್ಯಾರ್ಥಿಗಳಿಂದ ನೃತ್ಯಯಜ್ಞ ನಡೆಯಲಿದೆ. ಉಳ್ಳಾಲ ಮೋಹನ ಕುಮಾರ್ ಉದ್ಘಾಟಿಸುವರು. ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ಕಾರ್ಯದರ್ಶಿ ಎಚ್.ಸೋಮಶೇಖರ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಭಾಗವಹಿಸುವರು.  ಬಿ.ಎನ್.ಗೋಪಾಲಕೃಷ್ಣ ರಾವ್ ದಂಪತಿಗೆ ವಿಶೇಷ ಸನ್ಮಾನ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ರತ್ನಾಕರ ಜೈನ್, ಸುಧಾಕರ ರಾವ್ ಪೇಜಾವರ, ಕೆ.ವಿ.ರಮಣ್, ರಶ್ಮಿ ಚಿದಾನಂದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement