ಸುಳ್ಯ: 20ರಿಂದ ಕೇಶವಕೃಪಾ ವೇದ ಶಿಬಿರ
ಸುಳ್ಯ: ಸುಳ್ಯದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಕೇಶವ ಕೃಪಾ ವೇದ ಶಿಬಿರವು ಇದೀಗ ತ್ರಯೋದಶ ಸಂಭ್ರಮದಲ್ಲಿದ್ದು, ಈ ಬಾರಿಯ ಶಿಬಿರವು ಏ.20ರಿಂದ ನಡೆಯಲಿದೆ. ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ್ ಭಟ್ ಮತ್ತು ವೇದ ಶಿಬಿರದ ಸಂಚಾಲಕ ಪ್ರಕಾಶ್ ಮೂಡಿತ್ತಾಯ ಪತ್ರಿಕಾಗೋಷ್ಟಿಯಲ್ಲಿ ಈ ಮಾಹಿತಿ ನೀಡಿದರು. 20 ರಂದು ಕರ್ಣಾಟಕ ಬ್ಯಾಕಿನ ನಿವೃತ್ತ ಪ್ರಬಂಧಕ ಬಾಲಕೃಷ್ಣ ಸರಳಾಯ ಮತ್ತು ಮಂಗಳೂರು ನೃತ್ಯ ಭಾರತಿ ನಿರ್ದೇಶಕಿ ವಿದುಷಿ ಗೀತಾ ಸರಳಾಯ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ನ ಅಧ್ಯಕ್ಷ ಸೋಂದಾ ನಾರಾಯಣ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.