ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮೊಬೈಲ್ ಮಳಿಗೆಯಿಂದ ಕಳ್ಳತನ

Lingaraj Badiger
Updated On : 16 Apr 2013, 12:24 pm

ಬಂಟ್ವಾಳ: ಇಲ್ಲಿನ ಕೈಕಂಬದಲ್ಲಿರುವ ಮೊಬೈಲ್ ಮಳಿಗೆಗೆ ಕಳ್ಳರು ನುಗ್ಗಿ ಸಾವಿರಾರು ರುಪಾಯಿ ಮೌಲ್ಯದ ಸೊತ್ತು ದೋಚಿರುವ ಘಟನೆಯೊಂದು ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಅಬ್ದುಲ್ ಖಾದರ್ ಎಂಬವರಿಗೆ ಸೇರಿದ ಮೊಬೈಲ್ ಅಂಗಡಿಯಲ್ಲಿ ಈ ಕಳವು ನಡೆದಿದ್ದು, ಮಳಿಗೆಯ ಶಟರ್‌ನ ಬೀಗ ಮುರಿದು ಒಳಹೊಕ್ಕ ಕಳ್ಳರು 3 ಚೈನಾ ಹ್ಯಾಂಡ್‌ಸೆಟ್, 5 ನೋಕಿಯಾ ಹ್ಯಾಂಡ್ ಸೆಟ್, ಮೊಬೈಲ್ ಬ್ಯಾಟರಿ, ಮೆಮೊರಿ ಕಾಡರ್, ಪೆನ್ ಡ್ರೈವ್, ರಿಚಾಜರ್ ಕೂಪನ್ಸೇರಿದಂತೆ ಒಟ್ಟು 23 ಸಾವಿರ ಮೌಲ್ಯದ ಸೊತ್ತ್ತುಗಳನ್ನು ಕಳವು ನಡೆಸಿರುವುದಾಗಿ ತಿಳಿದು ಬಂದಿದೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement