ಕೆವಿಜಿ ಕಾಲೇಜಲ್ಲಿ ರಾಷ್ಟ್ರ ಮಟ್ಟದ ತಾಂತ್ರಿಕ ಹಬ್ಬ
ಸುಳ್ಯ: ಸುಳ್ಯ ಕೆ.ವಿ.ಜಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ತಾಂತ್ರಿಕ ಉತ್ಸವ -2013 ಜರುಗಿತು.
ಎ.ಐ.ಸಿ.ಟಿ.ಇ. ನಿರ್ದೇಶಕ ಡಾ. ಸುರೇಶ್ ಎಸ್.ಎಂ. ಕಾರ್ಯಕ್ರಮ ಉದ್ಘಾಟಿಸಿದರು. ಎ.ಓ.ಎಲ್.ಇ. ಕಾರ್ಯದರ್ಶಿ ಪಡ್ಡಂಬೈಲು ವೆಂಕಟ್ರಮಣ ಗೌಡ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕುವೆಂಪು ವಿಶ್ವವಿದ್ಯಾನಿಲಯದ ನಿವೃತ್ತ ಉಪಕುಲಪತಿ ಪ್ರೊ. ಚಿದಾನಂದ ಗೌಡ ಕೊಳಂಬೆ, ಕೆ.ವಿ.ಜಿ. ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರಾದ ಡಾ. ಎನ್.ಎ. ಜ್ಞಾನೇಶ್, ಉಪಪ್ರಾಂಶುಪಾಲ ಡಾ. ಎಚ್.ಆರ್. ಶಿವಕುಮಾರ್, ಕಾರ್ಯಕ್ರಮದ ಆಯೋಜಕ ಪ್ರೊ. ಉಜ್ವಲ್ ಊರುಬೈಲು ಉಪಸ್ಥಿತರಿದ್ದರು.
ಪ್ರೊ. ಉಜ್ವಲಾ ಸ್ವಾಗತಿಸಿದರು. ಕಾಲೇಜಿನ ಇಲೆಕ್ಟ್ರಿಕಲ್- ಇಲೆಕ್ಟ್ರಾನಿಕ್ಸ್ ವಿಭಾಗ ಮುಖ್ಯಸ್ಥ ಪ್ರೊ. ದೇವದಾಸ್ ವಂದಿಸಿದರು. ಪ್ರಾಧ್ಯಾಪಿಕೆ ಬಿಂದು, ವಿದ್ಯಾರ್ಥಿಗಳಾದ ಫ್ರಾನ್ಸಿ ಡಿ'ಸೋಜ ಮತ್ತು ವಿಜಿತಾ ಯು.ಜೆ. ನಿರೂಪಿಸಿದರು.