ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಡಾ. ರಘುಗೆ ದಸಂಸ ಬೆಂಬಲ ಘೋಷಣೆ

Lingaraj Badiger
Updated On : 17 Apr 2013, 1:29 am

ಸುಳ್ಯ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಡಿ.ಜಿ. ಸಾಗರ್ ಮತ್ತು ಲಕ್ಷ್ಮೀನಾರಾಯಣ ನಾಗವಾರ ಬಣಗಳ ಬೆಂಬಲ ಕಾಂಗ್ರೆಸ್ ಅಭ್ಯರ್ಥಿ ಡಾ. ರಘುರವರಿಗೆ ನೀಡಲು ತೀರ್ಮಾನಿಸಿರುವುದಾಗಿ ಮುಖಂಡರು ತಿಳಿಸಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂಚಾಲಕರಾದ ಅಚ್ಚುತ ಮಲ್ಕಜೆ ಹಾಗೂ ಡಿ.ಕೆ. ಆನಂದ ತೊಡಿಕಾನ, ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿದ್ದ ಅಂಗಾರರು ದಲಿತರಿಗಾಗಿ ಏನೂ ಮಾಡಿಲ್ಲ. ಅಂಬೇಡ್ಕರ್ ಭವನ ನಿರ್ಮಿಸಲು ಕೂಡಾ ಅವರಿಂದ ಸಾಧ್ಯವಾಗಿಲ್ಲ. ಸುಳ್ಯ ಕ್ಷೇತ್ರದ ಎಲ್ಲ ಕಾಲನಿಗಳಲ್ಲೂ ಸಮಸ್ಯೆಗಳು ತುಂಬಿವೆ. ಈ ನಿಟ್ಟಿನಲ್ಲಿ ಡಾ. ರಘು ಅವರನ್ನು ಬೆಂಬಲಿಸಲು ತೀರ್ಮಾನಿಸಿರುವುದಾಗಿ ಅವರು ಹೇಳಿದರು. ಅಂಬೇಡ್ಕರ್ ನಿಗಮದಿಂದ ಬರುವ ಸೌಲಭ್ಯ ವಿತರಣೆಯನ್ನು ಅಂಗಾರರು ತಾರತಮ್ಯ ತೋರಿದ್ದಾರೆ. ಕೇವಲ ಬಿಜೆಪಿ ಬೆಂಬಲಿಗರಿರುವ ಕಡೆಗಳಲ್ಲಿ ಮಾತ್ರ ಅವರ ಅನುದಾನ ಹೋಗಿದೆ ಎಂದು ಅವರು ಆರೋಪಿಸಿದರು. ಮಾಧವ ಐವರ್ನಾಡು, ವಿಜಯ ಎಸ್, ರಾಮಚಂದ್ರ ಬಿ, ಮೋನಪ್ಪ ಪತ್ರಿಕಾಗೋಷ್ಠಿಯಲ್ಲಿದ್ದರು.

ಕಾಂಗ್ರೆಸ್ ಸೇರಿಲ್ಲ; ಲೋಬೋ
ವಿರುದ್ಧ ಗಣೇಶ್ ರಾವ್ ದೂರು
ಮಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದಾಗಿ ಮಾಧ್ಯಮಗಳಿಗೆ ಸುಳ್ಳು ಹೇಳಿಕೆ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್. ಲೋಬೋ ವಿರುದ್ಧ ಮಹಾನಗರ ಪಾಲಿಕೆ ಮಾಜಿ ಸದಸ್ಯ, ಬಿಜೆಪಿ ಕಾರ್ಯಕರ್ತ ಬಿ. ಗಣೇಶ್ ರಾವ್, ಕದ್ರಿ ಪೊಲೀಸರಿಗೆ ದೂರು ನೀಡಿದ್ದಾರೆ. ತಾನು ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಭಾಗವಹಿಸಿಲ್ಲ, ಕಾಂಗ್ರೆಸ್‌ಗೆ ಸೇರಲೂ ಇಲ್ಲ. ತಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಮೊದಲಿಂದಲೇ ಬಿಜೆಪಿಯಲ್ಲಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ದುರುದ್ದೇಶಪೂರ್ವಕ ತನ್ನ ರಾಜಕೀಯ ತೇಜೋವಧೆಗೆ ಹಾಗೂ ಪಕ್ಷದ ವಿರುದ್ಧ ಅಗ್ಗದ ಪ್ರಚಾರ ನಡೆಸಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ಗಣೇಶ್ ರಾವ್ ತಿಳಿಸಿದ್ದಾರೆ.


ದಕ್ಷಿಣ ಕನ್ನಡ: 8 ಮಂದಿ ವೀಕ್ಷಕರ ನೇಮಕ
ಮಂಗಳೂರು: ದ.ಕ.ಜಿಲ್ಲೆಗೆ ಚುನಾವಣಾ ವೀಕ್ಷಕರಾಗಿ 8 ಮಂದಿಯನ್ನು ಚುನಾವಣಾ ಆಯೋಗ ನೇಮಕ ಮಾಡಿದೆ. ಚುನಾವಣೆಗೆ ಸಂಬಂಧಿಸಿ ಯಾವುದೇ ತಕರಾರುಗಳಿದ್ದರೆ ದೂರವಾಣಿ ಇಲ್ಲವೇ ಪತ್ರ ಮೂಲಕ ಇವರನ್ನು ಸಂಪರ್ಕಿಸಬಹುದು. ಬೆಳ್ತಂಗಡಿಗೆ ಡಾ.ಜಗದೀಶ್ ಪಾಟೀಲ್(9483506408), ಮೂಡುಬಿದಿರೆಗೆ ಮುಖೇಶ್ ಕುಮಾರ್(9483506401)ಮಂಗಳೂರು ಉತ್ತರಕ್ಕೆ ಡಾ.ದಿನೇಶ್ ಕುಮಾರ್ ಗೋಯಲ್(9483506402), ಮಂಗಳೂರು ದಕ್ಷಿಣಕ್ಕೆ ಪುಷ್ಯಪತಿ ಸಕ್ಸೇನಾ(9483506403), ಮಂಗಳೂರು ಕ್ಷೇತ್ರಕ್ಕೆ ಆರ್.ಸಿ.ವರ್ಮಾ(9483506384), ಬಂಟ್ವಾಳಕ್ಕೆ ಪರಶುರಾಮ ಮಿಶ್ರಾ(9483506405), ಪುತ್ತೂರಿಗೆ ಮಂಜು ರಾಜ್‌ಪಾಲ್(9483506406)ಹಾಗೂ ಸುಳ್ಯಕ್ಕೆ ಅನಿಲ್ ಕುಮಾರ್ ಸಿಂಗ್(9483506407) ಮತ್ತು ಜಿಲ್ಲೆಗೆ ಪೊಲೀಸ್ ವೀಕ್ಷಕರಾಗಿ ರವಿಕಾಂತ್ ಮಿತ್ತಲ್(9483506383) ಆಗಮಿಸಿದ್ದಾರೆ. ಚುನಾವಣಾ ಖರ್ಚುವೆಚ್ಚ ವೀಕ್ಷಕರಾಗಿ ಬೆಳ್ತಂಗಡಿ, ಮೂಡುಬಿದಿರೆ, ಪುತ್ತೂರು, ಸುಳ್ಯಕ್ಕೆ ವಿನೀಶ್ ಚೌಧರಿ(9483506411), ಮಂಗಳೂರು ದಕ್ಷಿಣ, ಬಂಟ್ವಾಳಕ್ಕೆ ಆರ್.ಕೆ.ಅಗರ್‌ವಾಲ್(9483506388), ಮಂಗಳೂರು ಉತ್ತರ, ಮಂಗಳೂರು ದಕ್ಷಿಣಕ್ಕೆ ಮೊಹಮ್ಮದ್ ಶಂಸದ್ ಅಲಂ(9483506399).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement