ಮೇ 22ರಂದು ಪೆರಾಜೆ ಸಭಾಭವನ ಲೋಕಾರ್ಪಣೆ
ವಿಟ್ಲ: ಮಾಣಿಯ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ರು. 3.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಸಭಾಭವನ ಮೇ 22ರಂದು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಕಾರ್ಯಕ್ರಮದ ಅಂಗವಾಗಿ ಮೇ 19ರಂದು ವಾಸ್ತು ಪೂಜೆ, ವಾಸ್ತು ಹೋಮ ಸೇರಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿದೆ. 20ರಂದು ಬೆಳಗ್ಗೆ ಸಭಾಭವನಕ್ಕೆ ಸೀತಾರಾಮಚಂದ್ರ ಚಂದ್ರಮೌಳೀಶ್ವರ ರಾಜರಾಜೇಶ್ವರೀ ದೇವತಾ ಸಹಿತ ಸ್ವರ್ಣಮಂಟಪದೊಂದಿಗೆ ಶ್ರೀ ರಾಘವೇಶ್ವರಭಾರತಿ ಸ್ವಾಮೀಜಿಯವರ ಪ್ರವೇಶೋತ್ಸವ, ತದನಂತರ ಸ್ವರ್ಣಮಂಟಪದಲ್ಲಿ ಶ್ರೀರಾಮದೇವರ ಪೂಜೆ, ಮಹಾಗಣಪತಿ ಹವನ, ಹೊರೆಕಾಣಿಕೆ ಸಮರ್ಪಣೆ, ಜೊತೆಗೆ ಮಂಗಳೂರು ಹೋಬಳಿಯ ರುದ್ರಾಧ್ಯಾಯಿಗಳ ರುದ್ರಪಠನ ನಡೆಯಲಿದೆ. ಮೇ 22ರಂದು ಬೆಳಗ್ಗೆ 8.51ರ ಮುಹೂರ್ತದಲ್ಲಿ ಸಾಮೂಹಿಕ ಉಪನಯನ, ಮಾಣಿ ಮಠದ ವಾರ್ಷಿಕೋತ್ಸವದೊಂದಿಗೆ ಮಧ್ಯಾಹ್ನ 2 ಗಂಟೆಗೆ ಸಭಾಭವನದ ಲೋಕಾರ್ಪಣೆ ನಡೆಯಲಿದೆ.
ಇದರೊಂದಿಗೆ ಹೊಸನಗರದ ಶ್ರೀ ರಾಮಚಂದ್ರ ಕೃಪಾ ಪೋಷಿತ ಯಕ್ಷಗಾನ ಮಂಡಳಿಯ 7ನೇ ವರ್ಷದ ತಿರುಗಾಟದ ಕೊನೆಯ ಸೇವೆಯಾಟ ಕೂಡಾ ಜರುಗಲಿದೆ.
ಮೇ 22ರಂದು ನಡೆಯುವ ಸಭಾಭವನ ಲೋಕಾರ್ಪಣೆಯ ಸಭಾ ಕಾರ್ಯಕ್ರಮದಲ್ಲಿ ಶ್ರೀರಾಮಚಂದ್ರಾಪುರ ಮಠದ ಸರ್ವಾಧ್ಯಕ್ಷ ಟಿ ಮಡಿಯಾಲ್, ಕೋಲ್ಕತಾ ಇಮಾಮಿ ಗ್ರೂಪ್ಸ್ನ ಆರ್ ಎಸ್ ಗೋಯೆಂಕಾ, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಜಿ. ಭೀಮೇಶ್ವರ ಜೋಷಿ, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಟಿ. ಶ್ಯಾಮ ಭಟ್, ಶ್ರೀರಾಮಚಂದ್ರಾಪುರ ಮಠದ ಕೇಂದ್ರೀಯ ಸಮಿತಿ ಅಧ್ಯಕ್ಷ ಎಂ.ಎನ್. ಭಟ್ ಮದ್ಗುಣಿ, ಕಾರ್ಯಾಧ್ಯಕ್ಷ ಸಿ.ಎಂ. ದಿವಾಕರ ಶಾಸ್ತ್ರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ. ಭಟ್, ಭಾರತ ಸರ್ಕಾರದ ಕಾರ್ಯದರ್ಶಿಗಳು ವಿ.ವಿ. ಭಟ್, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್ ಎಸ್ ಹೆಗಡೆ, ಅಖಿಲ ಹವ್ಯಕ ಮಹಾ ಸಭಾ ಅಧ್ಯಕ್ಷ ಎಸ್.ಜೆ. ಹೆಗಡೆ, ಶ್ರೀರಾಮಚಂದ್ರಾಪುರ ಮಠದ ದಿಗ್ದರ್ಶಕ ಮಂಡಳಿ ಸದಸ್ಯ ಕೆ. ರಾಮ ಭಟ್ ಉರಿಮಜಲು, ಮುಂಬಯಿ ಉಧ್ಯಮಿ ಎಂ.ಕೆ. ಜನಾರ್ದನ, ಹವ್ಯಕ ಮಹಾಮಂಡಲ ಮಾತೃ ವಿಭಾಗ ಪ್ರಧಾನರು ಕುಮುಟಾ ಯಮುನಾ ಭಾಗ್ವತ್ ಉಪಸ್ಥಿತರಿರಲಿದ್ದಾರೆ.
ಸಮಿತಿ ರಚನೆ: ಇದರೊಂದಿಗೆ ಚಾತುರ್ಮಾಸ್ಯ ಸೇವಾ ಸಮಿತಿಯಲ್ಲಿ ಗೌರವಾಧ್ಯಕ್ಷರಾಗಿ ಕೆ. ರಾಮ ಭಟ್ ಉರಿಮಜಲು, ಕಾರ್ಯಾಧ್ಯಕ್ಷರಾಗಿ ಹಾರಕರೆ ನಾರಾಯಣ ಭಟ್, ಸೇವಾ ಸಮಿತಿ ಮಾರ್ಗದರ್ಶಕರಾಗಿ ಆರ್.ಎಸ್. ಹೆಗಡೆ, ಮಹಾಬಲ ಭಟ್ ಮುಳಿಯ, ಬಿ.ಜಿ. ರಾಮ ಭಟ್, ಮುಗುಳಿ ತಿರುಮಲೇಶ್ವರ ಭಟ್, ಪಡೀಲು ಮಹಾಬಲೇಶ್ವರ ಭಟ್, ಪ್ರಧಾನ ಕಾರ್ಯದರ್ಶಿಯಾಗಿ ಸೇರಾಜೆ ಸುಬ್ರಹ್ಮಣ್ಯ ಭಟ್, ಸಂಘಟನಾ ಕಾರ್ಯದರ್ಶಿಯಾಗಿ ಕೆ.ಟಿ. ವೆಂಕಟೇಶ್ವರ ನೂಜಿ, ಉಪಾಧ್ಯಕ್ಷರಾಗಿ ಕೆ.ಪಿ. ಭಟ್, ಈಶ್ವರ ಭಟ್ ಸೇರಾಜೆ, ಡಾ. ವಿ.ವಿ. ರಮಣ, ಕೋಶಾಧ್ಯಕ್ಷರಾಗಿ ಜನಾರ್ದನ ಭಟ್ ಬಂಗಾರಡ್ಕ, ಜತೆ ಕಾರ್ಯದರ್ಶಿಯಾಗಿ ಶಂಕರ ಭಟ್ ಬಾಲ್ಯ, ಶ್ರೀಕೃಷ್ಣ ಮೀನಗದ್ದೆ, ಸುಬ್ಬರಾಜ ಶಾಸ್ತ್ರಿ ಮಣಿಲ, ಲೆಕ್ಕಪತ್ರದ ಬಗ್ಗೆ ನಾಗರಾಜ ಭಟ್ ಪದಮಲೆ, ಈಶ್ವರ ಭಟ್ ಮತ್ತೂರು, ಶ್ರೀಪತಿ ಭಟ್ ಬಳ್ಳೇರಿ ಮತ್ತು ಇತರ ಅನೇಕ ಉಪಸಮಿತಿಗಳನ್ನು ರಚಿಸಿ ಜವಾಬ್ದಾರಿ ನೀಡಲಾಯಿತು. ಚಾತುರ್ಮಾಸ್ಯದ ಅವಧಿಯಲ್ಲಿ 21 ದಿನಗಳ ಕಾಲ ನಡೆಯಲಿರುವ ಶ್ರೀರಾಮಕಥಾ ಕಾರ್ಯಕ್ರಮದ ಉಪಸಮಿತಿ ಅಧ್ಯಕ್ಷರನ್ನಾಗಿ ಟಿ.ಜಿ. ರಾಜಾರಾಮ ಭಟ್ ಅವರನ್ನು ನೇಮಕ ಮಾಡಲಾಗಿದೆ.