ದ.ಕನ್ನಡ: 130 ಮಂದಿ, 138 ನಾಮಪತ್ರ ಸಲ್ಲಿಕೆ
ಮಂಗಳೂರು: ಮೇ 5ರಂದು ನಡೆಯುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಬುಧವಾರ ಮುಕ್ತಾಯವಾಗಿದೆ. ದ.ಕ.ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ 8 ಸ್ಥಾನಕ್ಕೆ 130 ಮಂದಿ 138 ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಪರಿಶೀಲನೆ ಗುರುವಾರ ನಡೆಯಲಿದ್ದು, ಏ.20 ನಾಮಪತ್ರ ಹಿಂದೆಗೆತಕ್ಕೆ ಕೊನೆದಿನ.
ಬಿಎಸ್ಪಿ 1, ಬಿಜೆಪಿ 23, ಸಿಪಿಐ 1, ಸಿಪಿಎಂ 4, ಎನ್ಸಿಪಿ 1, ಕಾಂಗ್ರೆಸ್ 17, ಜೆಡಿಎಸ್ 13, ಆರ್ಪಿಐ 1, ಸ್ವತಂತ್ರ 49, ಜೆಡಿಯು 3, ಎಸ್ಡಿಪಿಐ 11, ಕೆಜೆಪಿ 10, ಐಯುಎಂಎಲ್ 1 ಸೇರಿ ಒಟ್ಟು 138 ನಾಮಪತ್ರ ಸಲ್ಲಿಕೆಯಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಕ್ಷೇತ್ರವಾರು ನಾಮಪತ್ರ ವಿವರ
-ಬೆಳ್ತಂಗಡಿಯಲ್ಲಿ ಬಿಎಸ್ಪಿ 1, ಬಿಜೆಪಿ 2, ಸಿಪಿಎಂ 2, ಕಾಂಗ್ರೆಸ್ 2, ಜೆಡಿಎಸ್ 2, ಜೆಡಿಯು 1, ಕೆಜೆಪಿ 1, ಸ್ವತಂತ್ರ 1.
-ಮೂಡುಬಿದಿರೆಯಲ್ಲಿ ಬಿಜೆಪಿ 3, ಕಾಂಗ್ರೆಸ್ 2, ಜೆಡಿಎಸ್ 1, ಎಸ್ಡಿಪಿಐ 2, ಕೆಜೆಪಿ 1, ಸ್ವತಂತ್ರ 2.
-ಮಂಗಳೂರು ಉತ್ತರದಲ್ಲಿ ಬಿಜೆಪಿ 3, ಕಾಂಗ್ರೆಸ್ 1, ಎನ್ಸಿಪಿ 1, ಎಸ್ಡಿಪಿಐ 2, ಕೆಜೆಪಿ 1, ಸ್ವತಂತ್ರ 4.
-ಮಂಗಳೂರು ದಕ್ಷಿಣದಲ್ಲಿ ಬಿಜೆಪಿ 5, ಸಿಪಿಎಂ 1, ಕಾಂಗ್ರೆಸ್ 3, ಜೆಡಿಎಸ್ 1, ಜೆಡಿಯು 1, ಎಸ್ಡಿಪಿಐ 1, ಕೆಜೆಪಿ 1, ಸ್ವತಂತ್ರ 10, ಪಿಪಿಐ 1.
-ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ 5, ಸಿಪಿಎಂ 1, ಕಾಂಗ್ರೆಸ್ 4, ಜೆಡಿಎಸ್ 2, ಜೆಡಿಯು 1, ಎಸ್ಡಿಪಿಐ 3, ಕೆಜೆಪಿ 3, ಸ್ವತಂತ್ರ 19.
-ಬಂಟ್ವಾಳದಲ್ಲಿ ಬಿಜೆಪಿ 2, ಕಾಂಗ್ರೆಸ್ 1, ಸಿಪಿಐ 1, ಜೆಡಿಎಸ್ 1, ಆರ್ಪಿಐ 1, ಎಸ್ಡಿಪಿಐ 2, ಕೆಜೆಪಿ 1, ಐಯುಎಂಎಲ್ 1, ಸ್ವತಂತ್ರ 2.
-ಪುತ್ತೂರಿನಲ್ಲಿ ಬಿಜೆಪಿ 2, ಕಾಂಗ್ರೆಸ್ 2, ಜೆಡಿಎಸ್ 4, ಎಸ್ಡಿಪಿಐ 2, ಕೆಜೆಪಿ 1, ಸ್ವತಂತ್ರ 2.
-ಸುಳ್ಯ: ಬಿಜೆಪಿ 1, ಕಾಂಗ್ರೆಸ್ 2, ಜೆಡಿಎಸ್ 1, ಎಸ್ಡಿಪಿಐ 1, ಕೆಜೆಪಿ 1, ಸ್ವತಂತ್ರ 8.