ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಿಜೆಪಿ ಶಾಸಕರ ಆಸ್ತಿ ಇಮ್ಮಡಿ

Lingaraj Badiger
Updated On : 18 Apr 2013, 11:57 am

-ಜಿತೇಂದ್ರ ಕುಂದೇಶ್ವರ
ಮಂಗಳೂರು:
  ಬಿಜೆಪಿ ಶಾಸಕರಾದ ಎನ್.ಯೋಗೀಶ್ ಭಟ್ ಮತ್ತು ಕೃಷ್ಣ ಜೆ.ಪಾಲೆಮಾರ್ ಮತ್ತು ಅಂಗಾರ ಘೋಷಿಸಿದ ಅಧಿಕೃತ ಆಸ್ತಿ 5 ವರ್ಷಗಳಲ್ಲಿ ಇಮ್ಮಡಿಯಾಗಿದೆ. ಪಾಲೆಮಾರ್ ವರ್ಷಕ್ಕೆ 1.98 ಕೋಟಿ ದಾಖಲೆ ತೆರಿಗೆ ಪಾವತಿ ಮಾಡಿದ್ದಾರೆ.
 ಮಾಜಿ ಉಸ್ತುವಾರಿ ಸಚಿವರೂ ಆಗಿದ್ದ ಕೃಷ್ಣ ಜೆ.ಪಾಲೆಮಾರ್ 2008ರಲ್ಲಿ ಚುನಾವಣೆಗೆ ಸ್ಪರ್ಧಿಸುವ ವೇಳೆ ತಮ್ಮ ಆದಾಯವನ್ನು 18.41 ಕೋಟಿ ಎಂದು ಘೋಷಿಸಿದ್ದರು. ಈ ವರ್ಷ 35.21 ಕೋಟಿ ಆದಾಯ ಘೋಷಣೆ ಮಾಡಿದ್ದಾರೆ. ಸಾಲ 3.6 ಕೋಟಿಯಿಂದ 12.4 ಕೋಟಿಗೆ ಏರಿದೆ. ಪತ್ನಿ ಜೆ.ಶಶಿಕಲಾ ಬಳಿ ಬಳಿ 2.82 ಕೋಟಿ ಸ್ಥಿರಾಸ್ತಿ ಇದೆ. ಚಿನ್ನಾಭರಣ ಸೇರಿ 3.78 ಕೋಟಿ ಚರಾಸ್ತಿ ಇದೆ. 5 ವರ್ಷಗಳ ಹಿಂದೆ ಪತ್ನಿ ಆಸ್ತಿ 9.5.28 ಕೋಟಿ ಆಗಿತ್ತು. ಕಳೆದ ವರ್ಷ ಆದಾಯ ತೆರಿಗೆ ರೂಪದಲ್ಲಿಯೇ ಪಾಲೆಮಾರ್ 1.98 ಕೋಟಿ ಪಾವತಿ ಮಾಡಿದ್ದಾರೆ!
ವಿಧಾನಸಭೆ ಉಪಾಧ್ಯಕ್ಷರೂ ಆಗಿರುವ ಎನ್.ಯೋಗೀಶ್ ಭಟ್ ಆಸ್ತಿ 90 ಲಕ್ಷದಿಂದ 1.78 ಕೋಟಿಗೆ ಏರಿದೆ. ಕಳೆದ ಬಾರಿ ಇದ್ದ ಸಾಲ 17.52 ಲಕ್ಷವನ್ನೂ ತೀರಿಸಿದ್ದಾರೆ.
ಪತ್ನಿ ಬಳಿ 5 ವರ್ಷದ ಹಿಂದೆ 3 ಲಕ್ಷ ಮೌಲ್ಯ ಚಿನ್ನಾಭರಣ ಇದ್ದರೆ 5 ವರ್ಷಗಳಲ್ಲಿ 5 ಲಕ್ಷಕ್ಕೇರಿದೆ. ಭಟ್ ಬಳಿ ಇರುವ ಚಿನ್ನಾಭರಣ ಮೌಲ್ಯ ಕೇವಲ 50 ಸಾವಿರ. 5 ವರ್ಷದ ಹಿಂದೆ 20 ಸಾವಿರ ಮೌಲ್ಯದ ಅಭರಣ ಇತ್ತು.
ಲೋಬೋ ಪತ್ನಿ ಶ್ರೀಮಂತೆ: ಮಹಾನಗರ ಪಾಲಿಕೆ ಮಾಜಿ ಆಯುಕ್ತ, ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್. ಲೋಬೋ ತಮ್ಮ ಆದಾಯವನ್ನು 3 ಕೋಟಿ ಘೋಷಿಸಿದ್ದಾರೆ. ಇದರಲ್ಲಿ ಪತ್ನಿ ಚರಾಸ್ತಿ 22.39 ಲಕ್ಷ ಮತ್ತು ಸ್ಥಿರಾಸ್ತಿ 2.04 ಕೋಟಿ.
ಅಂಗರ ಆಸ್ತಿ ಇಮ್ಮಡಿ: ಸುಳ್ಯ ಮೀಸಲು ಕ್ಷೇತ್ರದ ಎಸ್. ಅಂಗರ ಆಸ್ತಿಯೂ ಇಮ್ಮಡಿಯಾಗಿದೆ.
  5 ವರ್ಷದ ಹಿಂದೆ 37.39 ಲಕ್ಷವಿದ್ದ ಆಸ್ತಿ ಮೌಲ್ಯ 5 ವರ್ಷಗಳ ಬಳಿಕ 91.91 ಲಕ್ಷಕ್ಕೇ ಏರಿದೆ. ಆದರೆ ನಾಲ್ಕು ಬಾರಿಯ ಶಾಸಕ ಅಂಗಾರಗೆ ಕೋಟಿ ಮುಟ್ಟಲು ಸಾಧ್ಯವಾಗಿಲ್ಲ. 11.08 ಲಕ್ಷ ಸಾಲ ಕಡಿಮೆಯಾಗುತ್ತಾ ಈಗ 6.48 ಲಕ್ಷಕ್ಕೆ ಇಳಿದಿದೆ.
ಮುಮ್ಮಡಿ ಅಭಯ: ಮೂಡುಬಿದಿರೆ ಕಾಂಗ್ರೆಸ್ ಅಭ್ಯರ್ಥಿ ಅಭಯಚಂದ್ರ ಜೈನ್ ಅವರ ಆಸ್ತಿ 5 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ಸಾಲ ನಾಲ್ಕು ಪಟ್ಟು ಹೆಚ್ಚಳವಾಗಿದೆ!
 ನಾಮಪತ್ರ ಸಲ್ಲಿಸುವ ವೇಳೆ ಅಭಯಚಂದ್ರ ಘೋಷಿಸಿದ ಆಸ್ತಿ ಈ ರೀತಿ ಇದೆ. ಪತ್ನಿ, ಮಗಳ ಆಸ್ತಿ 5 ವರ್ಷದ ಹಿಂದೆ 1.59 ಕೋಟಿ ಇದ್ದದ್ದು ಇದೀಗ 5.35 ಕೋಟಿ ಹೆಚ್ಚಳವಾಗಿದೆ. ಚಿನ್ನಾಭರಣ ಸಹಿತ ಚರಾಸ್ತಿ ಕೂಡಾ 1.21 ಕೋಟಿ ಇದ್ದದ್ದು ಈಗ 3.7 ಕೋಟಿಗೆ ಏರಿದೆ. ಸ್ಥಿರಾಸ್ತಿ 38.39 ಲಕ್ಷ ಇದ್ದದ್ದೂ ಈಗ 1.67 ಕೋಟಿಗೆ ಏರಿದೆ. ಸಾಲ ಕೂಡಾ 1.44 ಕೋಟಿಯಿಂದ 5.16 ಕೋಟಿಗೆ ಏರಿದೆ.
 ಜೈನ್ ಕುಟುಂಬ ಬಸ್ ಖರೀದಿಗೆ ಹಣ ಹಾಕಿದ್ದೇ ಹೆಚ್ಚು. 2008ರಲ್ಲಿ 8 ಬಸ್ಗಳಿದ್ದರೆ. 5 ವರ್ಷಗಳ ಬಳಿಕ ಐದು ಬಸ್ ಖರೀದಿಸಿದ್ದಾರೆ. ಇದರಲ್ಲಿ 1.01 ಕೋಟಿ ಐಷಾರಾಮಿ ಬಸ್ ಕೂಡಾ ಸೇರಿದೆ.
4 ಬಸ್ಗಳು ಪತ್ನಿ ಹೆಸರಲ್ಲಿ ಖರೀದಿಸಲಾಗಿದೆ. 18 ಲಕ್ಷದ ಹೈ ಎಂಡ್ ಕಾರ್ ಖರೀದಿಸಿದ್ದು, ಪತ್ನಿ 60 ಲಕ್ಷದ ಪ್ಲ್ಯಾಟ್ ಖರೀದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement