ಮೆಸ್ಕಾಂ ಲೈನ್ಮ್ಯಾನ್ ಲೋಕಾಯುಕ್ತ ಬಲೆಗೆ
ಬೆಳ್ತಂಗಡಿ: ಮೆಸ್ಕಾಂನ ಲೈನ್ಮ್ಯಾನ್ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ರೆಡ್ಹ್ಯಾಂಡ್ ಆಗಿ ಬಂಧಿಸಿದ ಘಟನೆ ಬುಧವಾರ ಮಧ್ಯಾಹ್ನ ಗೇರುಕಟ್ಟೆಯಲ್ಲಿ ಸಂಭವಿಸಿದೆ.
ಗೇರುಕಟ್ಟೆ ಪ್ರದೇಶದಲ್ಲಿ ಲೈನ್ಮ್ಯಾನ್ ಆಗಿರುವ ಪುರಂದರ ಬಂಧಿತ ಆರೋಪಿ. ಈತ ಜಾರಿಗೆಬೈಲು ನಿವಾಸಿ ಹೈದರ್ ಎಂಬವರ ಮನೆಯ ಸರ್ವಿಸ್ ತಂತಿ ಬದಲಾಯಿಸಲು ಲಂಚ ಕೇಳಿದ್ದರು ಎನ್ನಲಾಗಿದೆ.
ಈ ಬಗ್ಗೆ ಹೈದರ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಬೆಳ್ತಂಗಡಿಗೆ ಆಗಮಿಸಿದ್ದ ಲೋಕಾಯುಕ್ತ ಅಧಿಕಾರಿಗಳು, ಆರೋಪಿ ಒಂದು ಸಾವಿರ ರುಪಾಯಿ ಲಂಚ ಪಡೆಯುತ್ತಿದ್ದ ವೇಳೆ ಪುರಂದರ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈತನ ವಿರುದ್ದ ಈಗಾಗಲೇ ಸ್ಥಳಿಯ ಪರಿಸರದಲ್ಲಿ ಹಲವಾರು ಆರೋಪಗಳಿದ್ದು ದೂರುಗಳು ಬಂದಿದ್ದವು ಎನ್ನಲಾಗಿದೆ. ದಾಳಿ ನೇತೃತ್ವವನ್ನು ಲೋಕಾಯುಕ್ತ ಡಿ.ವೈ.ಎಸ್.ಪಿ. ವಿಠಲದಾಸ ಪೈ, ದಿಲೀಪ್ ಕುಮಾರ್, ಉಮೇಶ್ ಶೇಟ್ ಭಾಗವಹಿಸಿದ್ದರು.