ಮೆಸ್ಕಾಂ ಲೈನ್ಮ್ಯಾನ್ ಲೋಕಾಯುಕ್ತ ಬಲೆಗೆ
ಕ.ಪ್ರ. ವಾರ್ತೆ ಬೆಳ್ತಂಗಡಿ ಏ.17
ಮೆಸ್ಕಾಂನ ಲೈನ್ಮ್ಯಾನ್ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬುಧವಾರ ಮಧ್ಯಾಹ್ನ ಗೇರುಕಟ್ಟೆಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಗೇರುಕಟ್ಟೆ ಪ್ರದೇಶದಲ್ಲಿ ಲೈನ್ಮ್ಯಾನ್ ಆಗಿರುವ ಪುರಂದರ ಬಂಧಿತ ಆರೋಪಿ. ಈತ ಜಾರಿಗೆಬೈಲು ನಿವಾಸಿ ಹೈದರ್ ಎಂಬವರ ಮನೆಯ ಸರ್ವಿಸ್ ತಂತಿ ಬದಲಾಯಿಸಲು ಲಂಚ ಕೇಳಿದ್ದರು. ಈ ಬಗ್ಗೆ ಹೈದರ್ ಲೋಕಾಯುಕ್ತರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಬುಧವಾರ ಬೆಳ್ತಂಗಡಿಗೆ ಆಗಮಿಸಿದ್ದ ಲೋಕಾಯುಕ್ತ ಅಧಿಕಾರಿಗಳು, ಆರೋಪಿ 1 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಪುರಂದರ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಳಿ ನೇತೃತ್ವವನ್ನು ಲೋಕಾಯುಕ್ತ ಡಿ.ವೈ.ಎಸ್.ಪಿ. ವಿಠಲದಾಸ ಪೈ, ದಿಲೀಪ್ ಕುಮಾರ್, ಉಮೇಶ್ ಶೇಟ್ ಭಾಗವಹಿಸಿದ್ದರು.