ಸುವರ್ಣ , ನ್ಯೂಸ್ 'ಮೆಗಾ ಫೈಟ್' ನಾಳೆ
ಮಂಗಳೂರು: ಸುವರ್ಣ ನ್ಯೂಸ್ 24X7 ನ 'ಮೆಗಾ ಫೈಟ್' ಕರಾವಳಿ ರಾಜಕೀಯದ ವಿಶೇಷ ಚರ್ಚೆ ನಗರದಲ್ಲಿ ಗುರುವಾರ ನಡೆಯಿತು. ಕಾಂಗ್ರೆಸ್ ಶಾಸಕ ರಮಾನಾಥ ರೈ, ಬಿಜೆಪಿಯ ರಘುಪತಿ ಭಟ್, ಸಿಪಿಎಂ ಮುಖಂಡ ಬಿ.ಮಾಧವ, ಉದಯವಾಣಿ ಬ್ಯೂರೋ ಚೀಫ್ ಮನೋಹರ ಪ್ರಸಾದ್ ಫೈಟ್ನಲ್ಲಿ ಭಾಗವಹಿಸಿದ್ದರು. ರಾಜಕೀಯ ಮುಖ್ಯ ವರದಿಗಾರ ಜಯಪ್ರಕಾಶ್ ಶೆಟ್ಟಿ ಉಪ್ಪಳ ಕಾರ್ಯಕ್ರಮ ನಡೆಸಿಕೊಟ್ಟರು. 2 ಗಂಟೆಗಳ ಕಾಲ ಬಿರುಸಿನ ಚರ್ಚೆ ನಡೆದಿದ್ದು, ಕಾರ್ಯಕ್ರಮದ ಪ್ರಸಾರ ಏ.20ರಂದು ಸಂಜೆ 7 ಗಂಟೆಗೆ 'ಸುವರ್ಣ ನ್ಯೂಸ್'ನಲ್ಲಿ ಪ್ರಸಾರವಾಗಲಿದೆ.