ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇಂದು ಪ್ರಾಣಿಕ್ ಹೀಲಿಂಗ್ ಶಿಬಿರ

Lingaraj Badiger
Updated On : 20 Apr 2013, 11:38 am

ಮಂಗಳೂರು: ಯೋಗ ವಿದ್ಯಾ ಪ್ರಾಣಿಕ್ ಹೀಲಿಂಗ್ ಫೌಂಡೇಶನ್ ವತಿಯಿಂದ ಏ. 20 ಮತ್ತು 21 ರಂದು ಬಲ್ಮಠ ಸಹೋದಯದಲ್ಲಿ ಪ್ರಾಣಿಕ್ ಹೀಲಿಂಗ್ ಶಿಬಿರ ನಡೆಸಲಾಗುವುದು. ಶಿಬಿರವು ಬೆಳಗ್ಗೆ 9ಕ್ಕೆ ಪ್ರಾರಂಭವಾಗಲಿದೆ. 16 ವರ್ಷಕ್ಕಿಂತ ಮೇಲ್ಪಟ್ಟ ಓದು ಬರಹ ತಿಳಿದಿರುವ ಯಾವುದೇ ವ್ಯಕ್ತಿ ಇದನ್ನು ಮಾಡಬಹುದು. ಇದೊಂದು ಪ್ರಾಣ ವಿಜ್ಞಾನವಾಗಿದ್ದು, ಇದರಲ್ಲಿ ಜೀವ ಚೈತನ್ಯವು ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾವಣೆಯಾಗುತ್ತದೆ. ಈ ಕೋರ್ಸಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ. ಮಾಹಿತಿಗಾಗಿ ಕಾರ್ಯಕ್ರಮ ಸಂಯೋಜಕ ರೋಹನ್ ಶಿರಿ-9845082856 ಸಂಪರ್ಕಿಸಿ.
ಇಂದು ಯಕ್ಷಮಂಗಳ ಪ್ರಶಸ್ತಿ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಡಾ.ಪಿ. ದಯಾನಂದ ಪೈ ಮತ್ತು ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಮಂಗಳ ಪ್ರಶಸ್ತಿಗೆ ಯಕ್ಷಗಾನ ಬಣ್ಣದ ವೇಷಧಾರಿ ಗೇರುಕಟ್ಟೆ ಗಂಗಯ್ಯ ಶೆಟ್ಟಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯನ್ನು 20 ರಂದು ಮಧ್ಯಾಹ್ನ 3.30ಕ್ಕೆ ವಿಶ್ವವಿದ್ಯಾಲಯದ ಮಂಗಳಾ ಸಭಾಂಗಣದಲ್ಲಿ ಕುಲಪತಿ ಪ್ರೊ.ಟಿ.ಸಿ. ಶಿವಶಂಕರಮೂರ್ತಿ ಪ್ರದಾನ ಮಾಡುವರು.  ಹಿರಿಯ ವಿಮರ್ಶಕ ಎ. ಈಶ್ವರಯ್ಯ, ಉದ್ಯಮಿ ಡಾ.ಪಿ. ದಯಾನಂದ ಪೈ ಪಾಲ್ಗೊಳ್ಳುವರು.ನಂತರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರಿಂದ 'ಅಭಿಮನ್ಯು ಕಾಳಗ' ಯಕ್ಷಗಾನ ಪ್ರದರ್ಶನ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement