ಇಂದು ಮೂಲ್ಕಿ ವೆಂಕಟರಮಣ ದೇವಳ ಬ್ರಹ್ಮರಥೋತ್ಸವ
ಮೂಲ್ಕಿ: ಮೂಲ್ಕಿಯ ಶ್ರೀ ವೆಂಕಟರಮಣ ದೇವಳದಲ್ಲಿ ವಾರ್ಷಿಕ ಬ್ರಹ್ಮರಥೋತ್ಸವವು ಶನಿವಾರ ಸಂಸ್ತಾನ ಕಾಶಿ ಮಠಾಧೀಶ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿ ಹಾಗೂ ಅವರ ಪಟ್ಟ ಶಿಷ್ಯ ಸಂಯುಮೀಂದ್ರ ತೀರ್ಥರ ಶುಭಾಶೀರ್ವಾದದೊಂದಿಗೆ ಜರಗಲಿದೆ.
ಶನಿವಾರ ಬೆಳಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ಮಹಾನೈವೇದ್ಯ, ದೇವರು ಯಜ್ಞಕ್ಕೆ ಹೊರಡುವುದು, ಸಂಜೆ ಯಜ್ಞದ ಪೂರ್ಣಾಹುತಿ, ಬ್ರಹ್ಮರಥಾರೋಹಣ, ಭೂರಿ ಸಮಾರಾಧನೆ, ರಾತ್ರಿ ಬ್ರಹ್ಮರಥದಲ್ಲಿ ದೇವರಿಗೆ ಪೂಜೆ, ಬ್ರಹ್ಮರಥೋತ್ಸವ, ದೇವದರ್ಶನ ಸೇವೆ, ಚಂದ್ರಮಂಡಲ ಉತ್ಸವ, ವಸಂತ ಪೂಜೆ, ಭಾನುವಾರ ಬೆಳಗ್ಗೆ ಕವಾಟೋದ್ಘಾಟನೆ, ಸಂಜೆ ಅವಭೃತ ಓಕುಳಿ ಉತ್ಸವ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.