ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿ ಸಾವು
ವಿಟ್ಲ: ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಜ್ವರದಿಂದ ಬಳಲಿ ಮೃತಪಟ್ಟ ಘಟನೆ ಮಂಗಳಪದವು ಎಂಬಲ್ಲಿ ಶುಕ್ರವಾರ ನಡೆದಿದೆ.
ಮಂಗಳಪದವು ಅಬೂಬಕ್ಕರ್ ಮತ್ತು ಮೈಮುನಾ ದಂಪತಿಯ ಪುತ್ರ ಸರಫುದ್ದೀನ್(16) ಮೃತಪಟ್ಟ ವಿದ್ಯಾರ್ಥಿ.
ಈತ ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶುಕ್ರವಾರ ಮಧ್ಯಾಹ್ನ ಮೃತಪಟ್ಟಿದ್ದಾನೆ.
ಮೃತ ವಿದ್ಯಾರ್ಥಿಯ ಮನೆಗೆ ವಾಲೇ ಮುಂಡಾವೊ ಉಸ್ತಾದ್, ಎಸ್ಎಸ್ಎಫ್ ವಿಟ್ಲ ಸೆಕ್ಟರ್ನ ಪದಾಧಿಕಾರಿಗಳು, ಎಸ್ವೈಎಸ್ ವಿಟ್ಲ ಸೆಂಟರ್ನ ಪದಾಧಿಕಾರಿಗಳು, ಜೇಸಿಸ್ ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಶಿಕ್ಷಕರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.