ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಫ್ಯಾಕ್ಸ್, ಇ-ಮೇಲ್ ಮೂಲಕ ಸಮನ್ಸ್ ಜಾರಿ: ಲೋಕಾಯುಕ್ತ

Lingaraj Badiger
Updated On : 20 Apr 2013, 11:34 am

ಮಂಗಳೂರು: ಪ್ರಕರಣದ ವಿಲೇವಾರಿ ತ್ವರಿತಗೊಳಿಸಲು ಫ್ಯಾಕ್ಸ್ ಮತ್ತು ಇ-ಮೇಲ್ ಮೂಲಕ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳಿಗೆ ತಿಳುವಳಿಕೆ ಪತ್ರ ಜಾರಿ ಮಾಡುವ ವ್ಯವಸ್ಥೆ (ಸಮನ್ಸ್) ಅಳವಡಿಸುವ ಚಿಂತನೆಯಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ್ ರಾವ್ ಹೇಳಿದ್ದಾರೆ.
 ಶುಕ್ರವಾರ ಉರ್ವಸ್ಟೋರಿನಲ್ಲಿ ಲೋಕಾಯುಕ್ತ ಕಚೇರಿ ಉದ್ಘಾಟಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.
 ಎಂದರು.
 2001ರಿಂದ ದೂರುಗಳು ಬಾಕಿಯಿದ್ದು, ಹೊಸ ದೂರುಗಳ ಜತೆ ಹಳೆ ದೂರುಗಳನ್ನು ವಿಲೇವಾರಿ ಮಾಡುವ ಯೋಜನೆಯಿದೆ. 'ದೂರು ದಾಖಲಾದ ದಿನಾಂಕದಿಂದ ಒಂದು ವರ್ಷ ಅವಧಿಯೊಳಗೆ ದೂರನ್ನು ಇತ್ಯರ್ಥಗೊಳಿಸುವುದು ನಮ್ಮ ಮುಂದಿನ ಗುರಿಯಾಗಿದೆ' ಎಂದು ಹೇಳಿದರು.
ಹೊಸ ಕಚೇರಿ ನಿರ್ಮಾಣಕ್ಕೆ ರು. 65 ಲಕ್ಷ ವೆಚ್ಚವಾಗಿದೆ. ರಾಜ್ಯ ಸರ್ಕಾರ ಹೆಚ್ಚಿನ ಅಭಿವೃದ್ಧಿಗಾಗಿ ರು. 95 ಲಕ್ಷ ಬಿಡುಗಡೆಗೊಳಿಸಿದೆ ಎಂದರು.
ಲೋಕಾಯುಕ್ತ ಎಡಿಜಿಪಿ ಎಚ್.ಎನ್. ಸತ್ಯನಾರಾಯಣ ರಾವ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 96 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 6 ಪ್ರಕರಣ ಬಿ ರಿಪೋರ್ಟ್ ಇತ್ಯರ್ಥವಾಗಿದೆ. 66 ದೂರುಗಳಿಗೆ ಚಾರ್ಜ್ಶೀಟ್ ಹಾಕಲಾಗಿದೆ. 24 ಪ್ರಕರಣಗಳು ತನಿಖಾ ಹಂತದಲ್ಲಿದೆ ಎಂದರು.
ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ. ಆಡಿ ಮಾತನಾಡಿ, ಬೆಂಗಳೂರಿನಲ್ಲಿ ನೇರವಾಗಿ ಮತ್ತು ಈ-ಮೇಲ್ ಮೂಲಕ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತದೆ. ಮಂಗಳೂರಿಗೆ ಗಮನಿಸಿದರೆ ಇದರ ಪ್ರಮಾಣ ಕಡಿಮೆ. ಉಡುಪಿಯಿಂದಲೂ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದೆ ಎಂದರು.
 ದೂರುದಾರನ ವಿರುದ್ಧ ಸಾಕ್ಷಿ ಹೇಳುವ ವ್ಯಕ್ತಿ ಕೊನೆಯ ಹಂತದಲ್ಲಿ ತಿರುಗಿ ಬೀಳುವ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.
 ಲೋಕಾಯುಕ್ತ ಕಚೇರಿಯಲ್ಲಿ ಸಾರ್ವಜನಿಕರಿಗೆ ಎಲ್ಲ ಸವಲತ್ತುಗಳಿದ್ದು, ತಮ್ಮ ಪ್ರಕರಣ ದಾಖಲಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಸಮಯಾವಕಾಶ, ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ವ್ಯವಸ್ಥೆ ಒದಗಿಸುವ ಯೋಜನೆಯಿದೆ. ಹೊಸ ಕಚೇರಿಯನ್ನು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ 0824- 2453420.
ರಿಜಿಸ್ಟ್ರಾರ್ ಬಿ. ಯೋಗಿನಾಥ್, ಡಿಐಜಿಪಿ ಪಾಂಡುರಂಗ ಎಚ್.ರಾಣೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement